ಬಾಗಲಕೋಟೆ : ಕೊರೊನಾ ಹಾಟ್ಸ್ಪಾಟ್ ಆಗಿದ್ದ ಜಿಲ್ಲೆಯಲ್ಲಿ ಸದ್ಯ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, 4 ಜನ ಗುಣಮುಖರಾಗಿದ್ದಾರೆ. ಇದರಿಂದ ಕೆಂಪು ವಲಯದಲ್ಲಿದ್ದ ಜಿಲ್ಲೆ ಹಳದಿ ವಲಯದತ್ತ ತಿರುಗುತ್ತಿದೆ.
ಜಮಖಂಡಿ ನಗರದಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಕೊರೊನಾ ಕೇಂದ್ರ ಬಿಂದುವಾಗಿದ್ದ ಬಾಗಲಕೋಟೆ ಹಳೇ ನಗರದಲ್ಲಿ ಕಳೆದ ಎಪ್ರಿಲ್ 18 ರಿಂದ ಹೊಸ ಪ್ರಕರಣಗಳು ಪತ್ತೆ ಆಗಿಲ್ಲ. ರೋಗಿ-188,9 ವರ್ಷದ ಬಾಲಕಿ, ರೋಗಿ-248, 43 ವರ್ಷದ ಪುರುಷ, ರೋಗಿ-249, 32 ವರ್ಷದ ಮಹಿಳೆ, ರೋಗಿ-251, 39 ವರ್ಷದ ಮಹಿಳೆ ಕೋವಿಡ್-19 ನಿಂದ ಗುಣಮುಖರಾಗಿದ್ದು, ಜಿಲ್ಲಾ ಸರ್ಜನ್ ಡಾ. ಪ್ರಕಾಶ ಬಿರಾದಾರ ಅಭಿನಂದಿಸಿ, ಕಾಣಿಕೆ ನೀಡಿ ಬಿಡುಗಡೆ ಮಾಡಿದರು.
122 ಸ್ಯಾಂಪಲ್ಗಳ ವರದಿ ನೆಗೆಟಿವ್ ಬಂದಿದೆ. ಇದರಲ್ಲಿ ಪತ್ರಕರ್ತರ ವರದಿ ಕೂಡಾ ನೆಗಟಿವ್ ಬಂದಿರುವುದು ಸಮಾಧಾನಕರ ಸಂಗತಿ. ಇನ್ನು 405 ಸ್ಯಾಂಪಲ್ ವರದಿ ಬರಬೇಕಾಗಿದೆ. 1,855 ಜನರನ್ನು ಹೋಮ್ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 3,096 ಸ್ಯಾಂಪಲ್ ಕಳುಹಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 2655 ನೆಗೆಟಿವ್ ಪ್ರಕರಣಗಳು, 30 ಪಾಸಿಟಿವ್ ಪ್ರಕರಣಗಳಿವೆ. ಓರ್ವ ವೃದ್ಧ ವ್ಯಕ್ತಿ ಮೃತಪಟ್ಟಿದ್ದು, 6 ವರದಿ ತಿರಸ್ಕಾ ರಗೊಂಡಿವೆ. 10 ಜನ ಗುಣಮುಖರಾಗಿದ್ದು, 198 ಜನರು 28 ದಿನಗಳ ಹೋಮ್ ಕ್ವಾರಂಟೈನ್ ಮುಗಿಸಿದ್ದಾರೆ.