ಬಾಗಲಕೋಟೆ: ಲಾಕ್ಡೌನ್ನಿಂದಾಗಿ ಜಿಲ್ಲೆಯ ಹುನಗುಂದ ಪಟ್ಟಣದ ಬಿಇಓ ಕಚೇರಿ ಪ್ರಾಂಗಣದಲ್ಲಿ ಚಸ್ಮಾ ಮಾರಿ ಬದುಕುತ್ತಿದ್ದ ಅಲೆಮಾರಿ ಜನ ಉಟಕ್ಕಾಗಿ ಪರದಾಡುತ್ತಿದ್ದಾರೆ.
ಮಕ್ಕಳೊಂದಿಗೆ ನೆಲೆಸಿರುವ ಹತ್ತು ಜನರು ಹಸಿವಿನಿಂದ ಕಂಗಾಲಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಅವರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ದಾನಿಗಳು ನೀಡಿದ ಅಲ್ಪ ಸ್ವಲ್ಪ ಆಹಾರವನ್ನೇ ಸೇವಿಸಿ ಉಸಿರಾಡುತ್ತಿದ್ದಾರೆ.
ಊರು ಊರು ಅಲೆಯುತ್ತಾ, ಚಸ್ಮಾ ಸೇರಿದಂತೆ ಇತರ ವಸ್ತುಗಳ ಮಾರುತ್ತಾ ಜೀವನ ಸಾಗಿಸುತ್ತಿದ್ದರು. ಈಗ ಜಾತ್ರೆ, ಸಂತೆ ಬಂದ್ ಆಗಿರುವ ಹಿನ್ನೆಲೆ ವ್ಯಾಪಾರ ಇಲ್ಲದೆ ಒಪ್ಪತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.