ಬಾಗಲಕೋಟೆ: ಗುಳೇದಗುಡ್ಡ ಪಟ್ಟಣದಲ್ಲಿರುವ ಅರಳಿಕಟ್ಟಿ ಬಸವಣ್ಣ ಮೂರ್ತಿಯು ಹಾಲು ಕುಡಿಯುತ್ತದೆ ಎಂದು ಜನರು ದೇವಾಲಯಕ್ಕೆ ಮುಗಿ ಬಿದ್ದಿರುವ ಘಟನೆ ನಡೆದಿದೆ.
ಬಸವಣ್ಣ ಹಾಲು ಕುಡಿಯುತ್ತಿದೆ ಎಂಬ ಸುದ್ದಿ ಹರಡಿದ ಹಿನ್ನೆಲೆ ವಿವಿಧ ಪ್ರದೇಶಗಳಿಂದ ಭಕ್ತರು ನೋಡಲು ಆಗಮಿಸುತ್ತಿದ್ದಾರೆ. ಚಮಚದಲ್ಲಿ ಹಾಲನ್ನು ಬಸವಣ್ಣ ಮುಂದೆ ಹಿಡಿದರೆ ಬಸವ ಹಾಲು ಕುಡಿಯುತ್ತಂತೆ. ಹಾಗಾಗಿ ಭಕ್ತರು ಮನೆಯಿಂದ ಹಾಲನ್ನು ತೆಗೆದುಕೊಂಡು ಬಂದು ಕುಡಿಸುತ್ತಿರುವುದು ಕಂಡುಬರುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವ ಕಾರಣ ದೇವಸ್ಥಾನದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಈ ಹಿಂದೆ ಇಂತಹ ಘಟನೆ ನಡೆದಿದ್ದು, ಇದು ದೇವರ ಪವಾಡ ಎನ್ನುತ್ತಾರೆ ಸ್ಥಳೀಯರಾದ ಶೇಖರ ಗಾಣಿಗೇರ. ಇನ್ನು ಇದೇ ರೀತಿಯ ಘಟನೆ ಕಲಬುರಗಿಯ ಬ್ಯಾಂಕ್ ಕಾಲೋನಿಯ ಈಶ್ವರ ದೇಗುಲದಲ್ಲಿ ನಡೆದಿತ್ತು. ಗುಡಿಯ ಮುಂದೆ ಬಸವಣ್ಣನ ಮೂರ್ತಿಯಿದ್ದು, ಭಕ್ತರೊಬ್ಬರು ಮೂರ್ತಿಗೆ ಹಾಲು ಕುಡಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಕಲ್ಲಿನ ಬಸವನಿಗೆ ಹಾಲು ಕುಡಿಸಲು ಮುಗಿಬಿದ್ದ ಜನ.. ಕ್ಷೀರ ಸೇವಿಸಿದನಾ ಬಸವಣ್ಣ!?