ಬಾಗಲಕೋಟೆ: ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಬಿಜೆಪಿ ಪಕ್ಷದ ನೂತನ ಜಿಲ್ಲಾಧ್ಯಕ್ಷರಾಗಿ ಶಾಂತಕುಮಾರಗೌಡ ಪಾಟೀಲ್ ಅವರ ಪದಗ್ರಹಣ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಹಿಂದಿನ ಅಧ್ಯಕ್ಷರಾಗಿದ್ದ ಸಿದ್ದು ಸವದಿ ಅವರಿಂದ ಪಕ್ಷದ ಧ್ವಜವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಲಾಯಿತು. ಈ ಸಮಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಜವಾಬ್ದಾರಿ ಕೊಟ್ಟಾಗ ಸಾಧನೆ ಮೇರು ವ್ಯಕ್ತಿತ್ವಕ್ಕೆ ಹೋಗಬೇಕು. ಕರ್ತವ್ಯದಲ್ಲಿ ಹುಚ್ಚನಂತೆ ಪಕ್ಷವನ್ನ ಕಟ್ಟಬೇಕಾಗಿದೆ. ಇದರಿಂದ ಮನೆ ಮನೆಯಲ್ಲಿ ಬಿಜೆಪಿ ಹುಚ್ಚು ಹಿಡಿಸಬೇಕು. ಈ ಮೂಲಕ ಇಂದು ಬಿಜೆಪಿ ಸುವರ್ಣಯುಗದಲ್ಲಿ ಇದೆ ಎಂದರು.
ಗ್ರಾಪಂನಿಂದ ಲೋಕಸಭೆವರೆಗೂ ಬಿಜೆಪಿ ಘರ್ಜಿಸುವ ಮಟ್ಟದಲ್ಲಿ ಬಂದು ನಿಂತಿದೆ. ಮುಂದಿನ ದಿನಮಾನದಲ್ಲಿ ಕಾಂಗ್ರೆಸ್ ಮುಕ್ತ ಬಾಗಲಕೋಟೆ ಮಾಡಿ, ಮುಂಬರುವ ಪಂಚಾಯಿತಿ ಚುನಾವಣೆಗಾಗಿ ಈಗನಿಂದಲೇ ಪ್ರತಿಜ್ಞಾ ಯಾತ್ರೆ ಆರಂಭಿಸಿ, ಗ್ರಾಪಂ, ತಾಪಂ, ಜಿಪಂನಲ್ಲಿ ಶೇ. 80 ಸ್ಥಾನ ಬಿಜೆಪಿ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.
ಈ ಸಮಯದಲ್ಲಿ ಮಾತನಾಡಿದ ಸಿದ್ದು ಸವದಿ ಅವರು, ಗೋದ್ರಾ ಘಟನೆ ಸಂಬಂಧ ಮೋದಿ ವಿರದ್ದ ಕಾಂಗ್ರೆಸ್ಸಿಗರು ಟೀಕೆ ಮಾಡ್ತಿದ್ದರು. ಅಮೆರಿಕಾಕ್ಕೆ ವೀಸಾ ಕ್ಯಾನ್ಸಲ್ ಮಾಡಿಸಿದ್ದರು. ಈಗ ಏನಾಗಿದೆ ಅದೇ ಅಮೆರಿಕಾ ಅಧ್ಯಕ್ಷ ಗುಜರಾತ್ಗೆ ಬಂದರು. ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ದೇಶಭಕ್ತ ಸಂಘಟನೆ ಆಗಿತ್ತು. ಆಗ ಭಾರತ ಮಾತಾಕೀ ಜೈ... ಒಂದೇ ಮಾತರಂ ಅಂತಿದ್ದರು. ಸ್ವಾತಂತ್ರ್ಯ ಬಂದ ಮೇಲೆ ಕಾಂಗ್ರೆಸ್ದವರು ಭಾರತ ಮಾತಾಕೀ ಜೈ ಅನ್ನಲಿಲ್ಲ. ಇಂಧಿರಾಗಾಂಧಿ, ರಾಜೀವಗಾಂಧಿ, ರಾಹುಲ್ ಗಾಂಧಿಗೆ ಜೈ ಹಾಕಿದ್ರು. ಹೀಗಾಗಿ ಕಾಂಗ್ರೆಸ್ ವಿನಾಶದತ್ತ ಸಾಗಿತು. ಈಗ ಜಗತ್ತು ಭಾರತದ ಕಡೆಗೆ ನೋಡ್ತಿದೆ. ನಾವು ಇವತ್ತು ಸುವರ್ಣಯುಗದ ಮಧ್ಯದಲ್ಲಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷ ಹೇಗಿದೆ...?
ಕತ್ತೆಯ ಉದಾಹರಣೆ ಕೊಟ್ಟು. ಏಳದ, ಓಡದ ಕತ್ತೆ ಕಥೆ ಹೇಳಿದರು. ಸೋನಿಯಾ ಗಾಂಧಿ ಮನೆ ಮುಂದೆ ಇದ್ದ ಕತ್ತೆ ಓಡಿಸಲು ಯಾವ ಮುಖಂಡರಿಗೂ ಆಗಲಿಲ್ಲ. ಕೊನೆಗೆ ಕತ್ತೆ ಓಡಿಸಲು ಸಿದ್ದರಾಮಯ್ಯ ಹೋಗಿದ್ದರು. ಸಿಎಂ ಸ್ಥಾನ ಕೊಡ್ತೇನೆ ಅಂತ ಮೇಡಂ ಸಹಿ ಹಾಕಿ ನೋಟರಿ ಮಾಡಿಸಿ ಅಂದ್ರು. ಅದಕ್ಕೆ ಒಪ್ಪಿ ಸಿದ್ದರಾಮಯ್ಯ ಕತ್ತೆ ಓಡಿಸಿದರು ಎಂದು ಕಟೀಲ್ ವ್ಯಂಗ್ಯ ವಾಡಿದರು.
ಇದು ಹೇಗೆ ಅಂತ ಖರ್ಗೆ ಕೇಳಿದ್ರು. ನೀನು ಇನ್ನು ಐದು ನಿಮಿಷ ಇದ್ರೆ ಕಾಂಗ್ರೆಸ್ ಮೆಂಬರ್ ಮಾಡ್ತೇನಿ ಅಂತಾ ಕತ್ತೆ ಕಿವಿಯಲ್ಲಿ ಹಳೀದೆ. ಆ ಬಳಿಕ ಅದು ಓಡಿ ಹೋಯ್ತು. ಹೀಗೆ ಕತ್ತೆ ಕಥೆ ಹೇಳಿ ಕಾಂಗ್ರೆಸ್ ಸ್ಥಿತಿ ಲೇವಡಿ ಮಾಡಿದ ನಳೀನ್ ಕುಮಾರ್ ಕಟೀಲ್ ಕಾರ್ಯಕರ್ತರನ್ನು ಮನರಂಜಿಸಿದರು.
ಇದೇ ಸಮಯದಲ್ಲಿ ಶಾಸಕ ಹಾಗೂ ಮಾಜಿ ಜಿಲ್ಲಾ ಅಧ್ಯಕ್ಷ ಸಿದ್ದು ಸವದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.