ETV Bharat / state

ಅಂಬಾ ಭವಾನಿಗೆ ನೋಟಿನ ಅಲಂಕಾರ... - ದಸರಾ ಹಬ್ಬ

ಬಾಗಲಕೋಟೆ ನಗರದ ಎಂ.ಜಿ.ರಸ್ತೆಯಲ್ಲಿರುವ ಅಂಬಾ ಭವಾನಿ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಯಿತು.

ನೋಟುಗಳಿಂದ ಅಲಂಕಾರ ಗೊಂಡ ಅಂಬಾ ಭಾವಾನಿ
author img

By

Published : Oct 6, 2019, 9:48 AM IST

Updated : Oct 6, 2019, 7:37 PM IST

ಬಾಗಲಕೋಟೆ: ದಸರಾ ಹಬ್ಬದ ಅಂಗವಾಗಿ ನಗರದ ಎಸ್.ಎಸ್.ಕೆ ಸಮಾಜದ ವತಿಯಿಂದ ಅಂಬಾ ಭವಾನಿ ದೇವಸ್ಥಾನದಲ್ಲಿ ಪ್ರತಿ ನಿತ್ಯ ಅಲಂಕಾರ ಹಾಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ನೋಟುಗಳಿಂದ ಅಂಬಾ ಭಾವಾನಿಗೆ ಅಲಂಕಾರ

ನಗರದ ಎಂ.ಜಿ.ರಸ್ತೆಯಲ್ಲಿರುವ ಅಂಬಾ ಭವಾನಿ ದೇವಿಯ ದರ್ಶನಕ್ಕೆ ಎಲ್ಲಾ ಜನಾಂಗದವರು ಸಂಜೆ ನಡೆಯುವ ಮಹಾಮಂಗಳಾರತಿ ಪೂಜೆಯಲ್ಲಿ ಪಾಲ್ಗೊಂಡು, ಪ್ರಸಾದ ಸ್ವೀಕರಿಸಿ ಭಕ್ತಿ ಮೆರೆಯುತ್ತಾರೆ. ದೇವಿಗೆ ಒಂದೂ ದಿನ ನಿಂಬೆಹಣ್ಣು, ಮೆಣಸಿನಕಾಯಿ ಸೇರಿದಂತೆ ಇತರ ಹಣ್ಣುಗಳಿಂದ ಅಲಂಕಾರ ಹಾಗೂ ಗಾಜಿನ ಬಳೆ, ಹೊಸ 100 ಹಾಗೂ 200 ರೂ. ನೋಟುಗಳಿಂದ ದೇವಿಗೆ ಅಲಂಕಾರ ಮಾಡಿದ್ದು ಗಮನ ಸೆಳೆಯುತ್ತಿತ್ತು.

ಸೆಪ್ಟಂಬರ್ 6ರಂದು ವೈಷ್ಟೋವಿ ದೇವಿ ಮಾದರಿಯಲ್ಲಿ ಅಲಂಕಾರ ಮಾಡಲಾಗಿತ್ತು. 200 ವರ್ಷಗಳ ಇತಿಹಾಸ ಇರುವ ದೇವಸ್ಥಾನ ಇದಾಗಿದೆ. ದೇವಿ ಕಷ್ಟಕಾರ್ಪಣ್ಯ ದೂರು ಮಾಡಿ, ಸುಖ ಸಮೃದ್ಧಿ ನೀಡುತ್ತಾಳೆ ಎಂಬುದು ಭಕ್ತರ ನಂಬಿಕೆಯಾಗಿದೆ.

ದಸರಾ ಹಬ್ಬದಲ್ಲಿ ಸಮಾಜದ ಅಧ್ಯಕ್ಷ ಗಣಪತಿ ನೇತೃತ್ವದಲ್ಲಿ ಪ್ರತಿ ನಿತ್ಯ ವಿವಿಧ ಅಲಂಕಾರ ಮಾಡಲಾಗುತ್ತದೆ.

Intro:AnchorBody:ಬಾಗಲಕೋಟೆ--ದಸರಾ ಹಬ್ಬದ ಅಂಗವಾಗಿ ನಗರದ ಎಸ್ ಎಸ್ ಕೆ ಸಮಾಜದ ಭಾಂದವರು,ಅಂಬಾ ಭವಾನಿ ದೇವಸ್ಥಾನದಲ್ಲಿ ಪ್ರತಿ ನಿತ್ಯ ದೇವಿಗೆ ಬೇರೆ ಬೇರೆ ರೂಪ ನೀಡಿ,ಅಲಂಕಾರ ಮಾಡುವ ಮೂಲಕ ಗಮನ ಸೆಳೆಯುತ್ತಿದೆ.
ನಗರದ ಎಂ.ಜಿ.ರಸ್ತೆಯಲ್ಲಿ ರುವ ಜಗದಂಬಾ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಒಂಬತ್ತು ದಿನಗಳಲ್ಲಿ ಯೂ ಒಂದು ವಿಶೇಷವಾದ ಅಲಂಕಾರ ಮಾಡಿ, ದೇವಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಎಸ್ ಎಸ್ ಕೆ ಸಮಾಜದ ಭಾಂದವರು ಅಷ್ಟೇ ಅಲ್ಲಾ,ಎಲ್ಲಾ ಜನಾಂಗದವರು ಸಂಜೆ ನಡೆಯುವ ಮಹಾಮಂಗಳಾರತಿ ಪೂಜೆಗೆ ಭಾಗವಹಿಸಿ,ಪ್ರಸಾದ ಸ್ವೀಕರಿಸಿ ಭಕ್ತಿಯನ್ನು ಮೆರೆಯುತ್ತಾರೆ.ದೇವಿಗೆ ಒಂದೂ ದಿನ ನಿಂಬೆಹಣ್ಣು, ಮೆಣಸಿನಕಾಯಿ ಸೇರಿದಂತೆ ಇತರ ಹಣ್ಣು ಗಳಿಂದ ಅಲಂಕಾರ,ಒಂದು ದಿನ ಗಾಜಿನ ಬಳೆಯಿಂದ,ಕಳೆದ ದಿನ ಹೊಸ ನೂರು ಹಾಗೂ ಎರಡು ನೂರು ಮೌಲ್ಯದ ರೂಪಾಯಿಗಳಿಂದ ದೇವಿಗೆ ಅಲಂಕಾರ ಮಾಡಿ ಗಮನ ಸೆಳೆಸಿದ್ದು,ಇಂದು ವೈಷ್ಟೋವಿ ದೇವಿ ಮಾದರಿಯಲ್ಲಿ ಅಲಂಕಾರ ಮಾಡಿ ಗಮನ ಸೆಳೆದರು.200 ವರ್ಷಗಳ ಇತಿಹಾಸ ಇರುವ ಈ ದೇವಿಗೆ ಜಾಗೃತ ದೇವಿ ಆಗಿದ್ದು,ಭಕ್ತಿಯಿಂದ ಭಕ್ತರು ಬೇಡಿಕೊಂಡಲ್ಲಿ,ಕಷ್ಟಕಾರ್ಪಣ್ಯ ದೂರು ಮಾಡಿ,ಸುಖ ಸಮೃದ್ದಿಯಿಂದ ದೇವಿ ಆರ್ಶಿವಾದ ಮಾಡುತ್ತಾಳೆ ಎಂದು ಭಕ್ತರ ನಂಬಿಕೆ ಇದೆ.ಸಮಾಜದ ಅಧ್ಯಕ್ಷೆ ಗಣಪತಿಸಾ ದಾನಿ ನೇತೃತ್ವದಲ್ಲಿ ಪ್ರತಿ ನಿತ್ಯ ಹೀಗೆ ವಿವಿಧ ಅಲಂಕಾರ ಮಾಡಿರುತ್ತಾರೆ. ತರುಣ ಸಂಘದ ಯುವಕರು, ಮಹಿಳಾ ಸಂಘ ದ ಸದಸ್ಯರು ಸೇರಿಕೊಂಡು ಹೀಗೆ ವಿಜೃಂಭಣೆಯಿಂದ ಪೂಜೆ ಸಲ್ಲಿಸುತ್ತಾರೆ. ಎಲ್ಲರೂ ಚಪ್ಪಾಳೆ ತಟ್ಟುತ್ತಾ ದೇವಿಗೆ ಪ್ರಾರ್ಥನೆ ಗೀತೆ ಹಾಡುತ್ತಾ,ನಮನ ಸಲ್ಲಿಸುತ್ತಾರೆ. ದಸರಾ ಹಬ್ಬದ ಅಂಗವಾಗಿ ಒಂಬತ್ತು ದಿನ ಕಾಲ ಹೀಗೆ ಪೂಜೆ ಸಲ್ಲಿಸಿ, ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ...Conclusion:ಈ ಟಿವಿ,ಭಾರತ,ಬಾಗಲಕೋಟೆ
Last Updated : Oct 6, 2019, 7:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.