ETV Bharat / state

ಸಹೋದರಿ ಜತೆ ಫೋನ್​ನಲ್ಲಿ ಮಾತ್ನಾಡಿದ ಯುವಕ.. ಕೋಪೋದ್ರಿಕ್ತ ಅಣ್ಣ ಆತನ ಕೊಲೆ ಮಾಡಿಬಿಟ್ಟ..

ತನ್ನ ಸಹೋದರಿ ಜೊತೆ ಫೋನ್​ನಲ್ಲಿ ಮಾತನಾಡಿದ್ದಕ್ಕೆ ಆಕ್ರೋಶಗೊಂಡ ಸಹೋದರನೊಬ್ಬ ತನ್ನ ಸ್ನೇಹಿತನ ಜೊತೆ ಸೇರಿ ಯುವಕನೊಬ್ಬನನ್ನು ಕೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗಾ ಕ್ರಾಸ್ ಬಳಿ ನಡೆದಿದೆ.

ಸಹೋದರಿ ಜೊತೆ ಫೋನ್​ನಲ್ಲಿ ಮಾತನಾಡಿದ್ದಕ್ಕೆ ಕೋಪಗೊಂಡ ಅಣ್ಣ...ಕೋಲಿನಿಂದ ಹೊಡೆದು ಯುವಕನ ಹತ್ಯೆ
author img

By

Published : Oct 11, 2019, 5:09 PM IST

ಬಾಗಲಕೋಟೆ: ತನ್ನ ಸಹೋದರಿ ಜೊತೆ ಫೋನ್​ನಲ್ಲಿ ಮಾತನಾಡಿದ್ದಕ್ಕೆ ಆಕ್ರೋಶಗೊಂಡ ಸಹೋದರನೊಬ್ಬ ತನ್ನ ಸ್ನೇಹಿತನ ಜೊತೆ ಸೇರಿ ಯುವಕನೊಬ್ಬನನ್ನು ಕೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗಾ ಕ್ರಾಸ್ ಬಳಿ ನಡೆದಿದೆ.

ಸಹೋದರಿ ಜೊತೆ ಫೋನ್​ನಲ್ಲಿ ಮಾತನಾಡಿದ್ದಕ್ಕೆ ಕೋಪಗೊಂಡ ಅಣ್ಣ.. ಕೋಲಿನಿಂದ ಹೊಡೆದು ಯುವಕನ ಹತ್ಯೆ!

ಸುನಗಾ ಗ್ರಾಮದ 22 ವರ್ಷದ ನಬಿಸಾಬ್ ತಹಶೀಲ್ದಾರ ಕೊಲೆಯಾದ ಯುವಕ. ಅದೇ ಗ್ರಾಮದ ವಿಠ್ಠಲ ವಡವಾಣಿ ಹಾಗೂ ಮಂಜುನಾಥ ನರಿ ಕೊಲೆ ಮಾಡಿರುವ ಆರೋಪಿಗಳು. ಕೊಲೆಯಾದ ನಬಿಸಾಬ್, ವಿಠ್ಠಲ ಎಂಬಾತನ ಸಹೋದರಿಯನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ನಬಿಸಾಬ್​ಗೆ ಎಚ್ಚರಿಕೆ ನೀಡಿದ್ದ ವಿಠ್ಠಲ, ತನ್ನ ಸಹೋದರಿ ಜೊತೆ ಫೋನಿನಲ್ಲಿ ಮಾತನಾಡದಂತೆಯೂ ತಾಕೀತು ಮಾಡಿದ್ದ ಎನ್ನಲಾಗಿದೆ. ಆದರೂ ವಿಠ್ಠಲನ ಸಹೋದರಿ ಜೊತೆ ನಬಿಸಾಬ್ ಫೋನಿನಲ್ಲಿ ಮಾತು ಮುಂದುವರೆಸಿದ್ದ.

ನಿನ್ನೆ ರಾತ್ರಿ ನಬಿಸಾಬ್​ನನ್ನ ಸುನಗಾ ಕ್ರಾಸ್ ಬಳಿ ಕರೆದೊಯ್ದು ವಿಠ್ಠಲ ಹಾಗೂ ಮಂಜುನಾಥ ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ. ಸುದ್ದಿ ತಿಳಿದ ಬೀಳಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಆರೋಪಿಗಳನ್ನ ಬಂಧಿಸಿದ್ದಾರೆ.

Intro:AnchorBody:ಸಹೋದರಿ ಜೊತೆ ಫೋನಿನಲ್ಲಿ ಮಾತನಾಡಿದ್ದಕ್ಕೆ ಆಕ್ರೋಶಗೊಂಡ ಸಹೋದರನೊಬ್ಬ ತನ್ಮ ಸ್ನೇಹಿತನ ಜೊತೆ ಸೇರಿ ಯುವಕನೊಬ್ಬನನ್ನು ಕೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಸುನಗಾ ಕ್ರಾಸ್ ಬಳಿ ನಡೆದಿದೆ. ಸುನಗಾ ಗ್ರಾಮದ ೨೨ ವರ್ಷದ ನಬಿಸಾಬ್ ತಹಸೀಲ್ದಾರ ಕೊಲೆಯಾದ ಯುವಕ. ಅದೇ ಗ್ರಾಮದ ವಿಠ್ಠಲ ವಡವಾಣಿ ಹಾಗೂ ಮಂಜುನಾಥ ನರಿ ಕೊಲೆ ಮಾಡಿರುವ ಆರೋಪಿಗಳು. ಕೊಲೆಯಾದ ನಬಿಸಾಬ್ ವಿಠ್ಠಲ ಎಂಬಾತನ ಸಹೋದರಿಯನ್ನು ಪ್ರೀತಿಸಿತ್ತಿದ್ದ. ಈ ಬಗ್ಗೆ ನಬಿಸಾಬ್ ಗೆ ಎಚ್ಚರಿಕೆ ನೀಡಿದ್ದ ವಿಠ್ಠಲ, ತನ್ನ ಸಹೋದರಿ ಜೊತೆ ಫೋನಿನಲ್ಲಿ ಮಾತನಾಡದಂತೆಯೂ ತಾಕೀತು ಮಾಡಿದ್ದ ಎನ್ನಲಾಗಿದೆ. ಆದರೂ ವಿಠ್ಠಲ ಸಹೋದರಿ ಜೊತೆ ನಬಿಸಾಬ್ ಫೋನಿನಲ್ಲಿ ಮಾತು ಮುಂದುವರೆಸಿದ್ದ, ನಿನ್ನೆ ರಾತ್ರಿ ಸುನಗಾ ಕ್ರಾಸ್ ಬಳಿ ಕರೆದೊಯ್ದ ವಿಠ್ಠಲ ಹಾಗೂ ಮಂಜುನಾಥ ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ. ಇನ್ನು ಸುದ್ದಿ ತಿಳಿದ ಬೀಳಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ. ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಬೀಳಗಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.