ETV Bharat / state

ದೇವದಾಸಿ ಮಹಿಳೆಯರ ನೆರವಿಗೆ ಬಂದ ಎಂಎಸ್​ಪಿಟಿಸಿ - latest bagalkote news

ಬಾಗಲಕೋಟೆ ಜಿಲ್ಲೆಯ ಎಂಎಸ್​ಪಿಟಿಸಿ ವತಿಯಿಂದ ದೇವದಾಸಿ ಮಹಿಳೆಯರಿಗೆ ಆಹಾರ ಪದಾರ್ಥಗಳ ಕಿಟ್​ ವಿತರಿಸಿದರು. ಜೊತೆಗೆ ಕೊರೊನಾ ಹೋರಾಟಕ್ಕೆ 1.16 ಲಕ್ಷ ಹಣ ನೀಡಿದ್ದಾರೆ.

devadasi womens
ದೇವದಾಸಿ ಮಹಿಳೆಯರ ನೆರವಿಗೆ ಬಂದ ಎಂಎಸ್​ಪಿಟಿಸಿ
author img

By

Published : May 17, 2020, 7:04 PM IST

ಬಾಗಲಕೋಟೆ : ಎಂಎಸ್​ಪಿಟಿಸಿ ಸಂಸ್ಥೆ ವತಿಯಿಂದ ಜಿಲ್ಲೆಯ ದೇವದಾಸಿ ಮಹಿಳೆಯರಿಗೆ ಗೋಧಿ, ತೊಗರಿ ಬೇಳೆ, ಹುರಳಿ ಕಾಳು, ಸಕ್ಕರೆ, ಕಡಲೆ ಬೇಳೆ ಸೇರಿದಂತೆ ಆಹಾರ ಪದಾರ್ಥಗಳ ಕಿಟ್‍ ವಿತರಿಸುವ ಕಾರ್ಯಕ್ಕೆ ಜಿ.ಪಂ ಸಿಇಒ ಗಂಗೂಬಾಯಿ ಮಾನಕರ ಚಾಲನೆ ನೀಡಿದರು.

ಜಿಲ್ಲಾಡಳಿತ ಭವನದ ಮುಖ್ಯ ದ್ವಾರದಲ್ಲಿ ಸಾಂಕೇತಿಕವಾಗಿ ಆಹಾರ ಪದಾರ್ಥಗಳ ಕಿಟ್‍ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ಜಿಲ್ಲೆಯ ಎಲ್ಲಾ ಎಂಎಸ್​ಪಿಟಿಸಿ ಗಳ ಅಧ್ಯಕ್ಷರು ಉಪಸ್ಥಿತರಿದ್ದರು.

devadasi womens
ಎಂಎಸ್‍ಪಿಟಿಸಿ ಯಿಂದ 1.16 ಲಕ್ಷ ನೆರವು

ಎಂಎಸ್‍ಪಿಟಿಸಿ ಯಿಂದ 1.16 ಲಕ್ಷ ನೆರವು
ಜಿಲ್ಲೆಯಲ್ಲಿರುವ ಒಟ್ಟು 5 ಎಂಎಸ್​ಪಿಟಿಸಿಗಳ ವತಿಯಿಂದ ಕೊವಿಡ್-19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1.16 ಲಕ್ಷ ರೂ.ಗಳ ಚೆಕ್‍ನ್ನು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರಿಗೆ ಹಸ್ತಾಂತರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.