ಬಾಗಲಕೋಟೆ: 2019-20ನೇ ಸಾಲಿನ ಎಸ್ಎಫ್ಸಿ ಹಾಗೂ 14ನೇ ಹಣಕಾಸು ಆಯೋಗದಲ್ಲಿ ತೆಗೆದುಕೊಂಡ 3 ಕೋಟಿ 79 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಬಿಜೆಪಿ ಮುಖಂಡ ಪ್ರಕಾಶ ತಪಶೆಟ್ಟಿ, ನಗರಭೆ ಪೌರಾಯುಕ್ತ ಗಣಪತಿ ಪಾಟೀಲ್, ಯಲ್ಲಪ್ಪ ನಾರಾಯಣಿ, ಜಿ.ಎನ್.ಪಾಟೀಲ್, ರಾಜು ನಾಯ್ಕರ, ಬಸವರಾಜ ಪಾತ್ರೋಟಿ, ಶರಣಪ್ಪ ಗುಳೇದ, ಶಿರಗಣ್ಣವರ, ಯಲ್ಲಪ್ಪ ಬೆಂಡಿಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.