ETV Bharat / state

'ಡಿಕೆಶಿ ನಿನಗೆ ತಾಕತ್ ಇದ್ದರೆ ಮಹಾರಾಷ್ಟ್ರದಲ್ಲಿ ಮಾತಾಡಿ': ಸಿದ್ದು ಸವದಿ ಸವಾಲ್ - ಮಹಾರಾಷ್ಟ್ರ ರಾಜ್ಯದಲ್ಲಿ ನಿಮ್ಮದೇ ನೇತೃತ್ವದ ಸರ್ಕಾರ

ಮಾತನಾಡಲಿಕ್ಕೆ ನಾಲಿಗೆ ಇದೆ ಅಂತೆಲ್ಲಾ ಏನೇನೋ ಹೇಳಬೇಡಿ, ತಾಕತ್ತು ಇದ್ದಲ್ಲಿ ಮಹಾರಾಷ್ಟ್ರ ರಾಜ್ಯದ ಬಗ್ಗೆ ಮಾತನಾಡಲಿ ಎಂದು ಶಾಸಕ ಸಿದ್ದು ಸವದಿ ಅವರು ಕೆಪಿಸಿಸಿ ಅಧ್ಯಕ್ಷರಿಗೆ ಸವಾಲ್ ಹಾಕಿದರು. ಇಡೀ ಜಗತ್ತಿಗೆ ಬಂದಿರುವ ಈ ಕೊರೊನಾದಿಂದ ಸಾಕಷ್ಟು ಸಾವು-ನೋವು ಆಗಿದೆ. ಆದರೆ ಇವರು ಮಾತ್ರ ಮೋದಿ, ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವುದು ಖಂಡನೀಯವಾಗಿದೆ ಎಂದರು.

mla-siddu-savadi
ಸಿದ್ದು ಸವದಿ ಸವಾಲ್
author img

By

Published : May 19, 2021, 8:50 PM IST

ಬಾಗಲಕೋಟೆ: ವಿನಾಕಾರಣ ಸರ್ಕಾರದ ಮೇಲೆ ಆರೋಪ ಮಾಡುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಮಾನ ಮರ್ಯಾದೆ ಇದೆಯಾ ಇಲ್ವಾ ಎಂದು ತೇರದಾಳ ಶಾಸಕ ಸಿದ್ದು ಸವದಿ ಟಾಂಗ್ ನೀಡಿದ್ದಾರೆ.

ಸಿದ್ದು ಸವದಿ ಸವಾಲ್

ಓದಿ: ಸೋಂಕಿತರ ಅಂತ್ಯಸಂಸ್ಕಾರ - ಐವರಿಗಷ್ಟೇ ಅವಕಾಶ: ಪಿಡಿಒಗಳಿಗೆ ಗುಂಡ್ಲುಪೇಟೆ ತಹಶೀಲ್ದಾರ್ ಸೂಚನೆ

ಮುಂದಿನ ಮುಖ್ಯಮಂತ್ರಿ ಎಂದು ಗುರುತಿಸಿಕೊಳ್ಳುತ್ತಿರುವ ಡಿಕೆಶಿ, ವಿನಾಕಾರಣ ಸರ್ಕಾರದ ಮೇಲೆ ಆರೋಪ ಮಾಡುವ ಬದಲು, ಮಹಾರಾಷ್ಟ್ರ ರಾಜ್ಯದಲ್ಲಿ ನಿಮ್ಮದೇ ನೇತೃತ್ವದ ಸರ್ಕಾರದ ಇದೆ. ಆ ಬಗ್ಗೆ ಮಾತನಾಡಿ, ಅಲ್ಲಿ ಕರ್ನಾಟಕಕ್ಕಿಂತ ನಾಲ್ಕು ಪಟ್ಟು ಜನ ಕೋವಿಡ್ ನಿಂದ ಸಾಯುತ್ತಿದ್ದಾರೆ. ಆ ಬಗ್ಗೆ ಚಿಂತನೆ ಮಾಡಿ ಎಂದು ತರಾಟೆಗೆ ತೆಗೆದುಕೊಂಡರು.

ಮಾತನಾಡಲಿಕ್ಕೆ ನಾಲಿಗೆ ಇದೆಯಂತೆ ಏನೆನೋ ಮಾತನಾಡಬೇಡಿ, ತಾಕತ್ತು ಇದ್ದಲ್ಲಿ ನಿಮ್ಮದೇ ಸರ್ಕಾರವಿರುವ ಮಹಾರಾಷ್ಟ್ರದ ಮಾತನಾಡಿ ಎಂದು ಸವಾಲ್ ಹಾಕಿದರು. ಇಡೀ ಜಗತ್ತಿಗೆ ಬಂದಿರುವ ಈ ಕೊರೊನಾದಿಂದ ಸಾಕಷ್ಟು ಸಾವು-ನೋವು ಸಂಭವಿಸಿದೆ. ಆದರೆ ಇವರು ಮಾತ್ರ ಮೋದಿ, ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವುದು ಖಂಡನೀಯವಾಗಿದೆ ಎಂದರು. ನಮ್ಮ ಶಾಸಕರು ಆಕ್ಸಿಜನ್ ಸೇರಿದಂತೆ ಇತರ ಸಾಮಾಜಿಕವಾಗಿ ಅನುಕೂಲವಾಗುವಂತಹ ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಲಸ ಮಾಡುವುದು ಬಿಟ್ಟು ಬರೀ ಆರೋಪ ಮಾಡಬೇಡಿ ಎಂದರು.

ನಮ್ಮ ಕ್ಷೇತ್ರದ ಮೇಡಂ ಇದ್ದಾರೆ, ಬರೀ ಬೆಂಗಳೂರಿನಲ್ಲಿ ಕುಳಿತುಕೊಂಡು ವಿಡಿಯೋ ಮಾಡಿ ಕಳಿಸುತ್ತಾರೆ. ಬನ್ನಿ ನಾವು ನೀವು ಕೂಡಿ ಕೆಲಸ ಮಾಡೋಣ, ಕೋವಿಡ್ ಗೆ ಹೆದರಿ ಬೆಂಗಳೂರಿನಲ್ಲಿ ಕುಳಿತುಕೊಂಡು ವಿಡಿಯೋ ಕಳಿಸುವುದು ಅಲ್ಲ. ರಸ್ತೆಗೆ ಇಳಿಯಿರಿ, ಗ್ರಾಮದಲ್ಲಿ ಸಂಚಾರ ಮಾಡಿ, ಜನರನ್ನು ಜಾಗೃತಗೊಳಿಸೋಣ ಎಂದು ಮಾಜಿ ಶಾಸಕಿ ಉಮಾಶ್ರೀ ಅವರಿಗೆ ಶಾಸಕ ಸಿದ್ದು ಸವದಿ ಟಾಂಗ್ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.