ಬಾಗಲಕೋಟೆ: ನಾವು ನೇರವಾಗಿ ಮಾತನಾಡ್ತೀವಿ ಅನ್ನೋ ಕಾರಣದಿಂದಲೇ ರಾಜ್ಯ ರಾಜಕಾರಣ ಸ್ವಲ್ಪ ಲೆಕ್ಕದಲ್ಲಿದೆ. ಇಲ್ಲವಾದರೆ ಕರ್ನಾಟಕ ಕಳ್ಳಕಾಕರು, ದರೋಡೆಕೋರರ ಕೈಯಲ್ಲಿ ಸಿಕ್ಕಿ ನಾಶವಾಗುತ್ತಿತ್ತು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು. ವಿಜಯಪುರದಲ್ಲಿ ನಾನು, ಬಾಗಲಕೋಟೆಯಲ್ಲಿ ಶಾಸಕ ಚರಂತಿಮಠ ಇಬ್ಬರೂ ನೇರವಾಗೇ ಮಾತನಾಡುತ್ತೇವೆ. ಬಾಕಿ ಗೀಕಿ ಇಟ್ಟು ಮಾತನಾಡುವ ಸ್ವಭಾವ ನಮ್ಮದಲ್ಲ ಎಂದರು.
ಇಂದಿನ ರಾಜಕೀಯದಲ್ಲಿ ನೇರವಾಗಿ ಮಾತನಾಡುವ ಪರಿಸ್ಥಿತಿ ಇಲ್ಲ. ಪ್ರಾಮಾಣಿಕವಾಗಿ, ನೇರವಾಗಿ ಮಾತನಾಡಿದ್ರೆ ಸಾಕು, ಏನ್ರಿ ಆತ ಬಹಳ ಡೈರೆಕ್ಟ್ ಮಾತನಾಡ್ತಾನೆ ಅಂತಾರೆ. ಆದರೆ ನಾವು ಡೈರೆಕ್ಟ್ ಆಗಿ ಮಾತನಾಡುತ್ತೇವೆ ಅಂತ ಹೇಳಿಯೇ ರಾಜ್ಯ ರಾಜಕಾರಣ ಸ್ವಲ್ಪ ಲೆಕ್ಕದಲ್ಲಿದೆ. ರಾಜಕೀಯದಲ್ಲಿ ಬಕೆಟ್ ಹಿಡಿದು ನಾಟಕ ಮಾಡಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿದ್ದೆ, ಚರಂತಿಮಠ ಮಂತ್ರಿ ಆಗುತ್ತಿದ್ದರು ಎಂದು ಹೇಳಿದರು.
ಇದನ್ನೂ ಓದಿ: ಅಕ್ರಮಕ್ಕೆ ಕುಮ್ಮಕ್ಕು, ಅನುಚಿತ ವರ್ತನೆ: ವಿಜಯನಗರ ಪೊಲೀಸ್ ಕಾನ್ಸ್ಟೇಬಲ್ ಸಸ್ಪೆಂಡ್