ಬಾಗಲಕೋಟೆ: ಸಿದ್ದರಾಮಯ್ಯ ಬೆಳಗಾದರೆ ತಾವು ಸಿಎಂ ಆಗಬೇಕು ಎನ್ನುತ್ತಿದ್ದು, ಅತ್ತ ಡಿಕೆಶಿ ಹೊಸದಾಗಿ ಭವಿಷ್ಯ ಹೇಳಲು ಶುರು ಮಾಡಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮಲು ವ್ಯಂಗ್ಯವಾಡಿದ್ದಾರೆ.
ಓದಿ: ಜೆಡಿಎಸ್ ಸೋಲಿಸಲಾಗದ ಬಿಜೆಪಿಯಿಂದ ಮೈತ್ರಿಯ ಕಪಟ ನಾಟಕ; ಎಚ್ಡಿಕೆ ಕಿಡಿ
ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಕನಸು-ಮನಸಿನಲ್ಲೂ ಮತ್ತೆ ಮುಖ್ಯಮಂತ್ರಿ ಆಗಲ್ಲ, ಡಿಕೆಶಿ ಭವಿಷ್ಯ ಸುಳ್ಳಾಗುತ್ತಿವೆ. ಡಿಕೆಶಿ ಮೊದಲು ಕೆಪಿಸಿಸಿ ಅಧ್ಯಕ್ಷ ಸ್ಥಾನ ಉಳಿಸಿಕೊಂಡರೆ ಸಾಕು ಎಂದು ಲೇವಡಿ ಮಾಡಿದರು. ಮುಖ್ಯಮಂತ್ರಿ ಚೇರ್ ಅಂತೂ ಖಾಲಿ ಇಲ್ಲ. ಡಿಕೆ ಶಿವಕುಮಾರ್ ಇತ್ತೀಚೆಗೆ ಬಹಳಷ್ಟು ಭವಿಷ್ಯ ಹೇಳ್ತಿದಾರೆ.
ಈ ಹಿಂದಿನ ವಿಧಾನಸಭಾ ಉಪಚುನಾವಣೆಯಲ್ಲಿ ತಾವೇ ಗೆಲ್ಲುತ್ತೇವೆ ಎಂದು ಭವಿಷ್ಯ ಹೇಳಿ ಸೋತರು. ಡಿಕೆಶಿ ಹೇಳಿದ ಭವಿಷ್ಯಗಳೆಲ್ಲ ಸುಳ್ಳಾಗಿವೆ ಎಂದು ತಿರುಗೇಟು ನೀಡಿದರು. ಸಿಎಂ ಸ್ಥಾನ ಉಳಿಯಲ್ಲ ಎಂಬ ಭವಿಷ್ಯ ಕೂಡಾ ಸುಳ್ಳಾಗುತ್ತೆ. ಅವರಲ್ಲಿ ಸಿಎಂ ಯಾರಾಗಬೇಕೆಂದು ಪೈಪೋಟಿಗೆ ಬಿದ್ದಿದ್ದು, ಕಾಂಗ್ರೆಸ್ ಪಾರ್ಟಿಯಲ್ಲಿ ಒಡಕಾಗಿದೆ.
ಇಂತಹ ಸಮಯದಲ್ಲಿ ಸಿದ್ದರಾಮಯ್ಯನವರು ಸಿಎಂ ಆಗಬೇಕೆಂದು ಹೊರಟಿದ್ದಾರೆ. ಇದು ಸಾಧ್ಯವಾಗದ ಕೆಲಸ ಎಂದು ಸಚಿವ ಶ್ರೀರಾಮುಲು ಟಾಂಗ್ ನೀಡಿದರು.