ಬಾಗಲಕೋಟೆ: ಯಾರದೋ ತ್ಯಾಗದಿಂದ ಬಂದಿರುವ ಸರ್ಕಾರದ ಫಲವನ್ನು ತಮ್ಮ ಜಾತಿಗೆ ಮೀಸಲಿಡಲು ಮುಂದಾಗುತ್ತಿದ್ದಾರೆ ಎಂಬ ತಿಂಥಿಣಿ ಶಾಖಾಮಠದ ಸಿದ್ದರಾಮಾನಂದ ಪುರಿ ಆರೋಪಿಸಿದರು. ಸ್ವಾಮೀಜಿ ಈ ಮಾತಿಗೆ ಆಕ್ರೋಶಗೊಂಡ ಸಚಿವ ಈಶ್ವರಪ್ಪ ಸ್ವಾಮೀಜಿ ಅವರನ್ನು ತರಾಟೆ ತೆಗೆದುಕೊಂಡರು.
ನಗರದಲ್ಲಿ ನಡೆದ ಕುರುಬರ ಎಸ್ಟಿ ಮೀಸಲಾತಿ ಹೋರಾಟ ಸಮಾವೇಶದಲ್ಲಿ ಮಾತನಾಡಿದ ಸ್ವಾಮೀಜಿ, ಶಾಸಕರ ತ್ಯಾಗದಿಂದ ಯಡಿಯೂರಪ್ಪ ಸರ್ಕಾರ ಬಂದಿದೆ. ಇದರ ಫಲ ಇನ್ನೊಂದು ಸಮಾಜ ತೆಗೆದುಕೊಳ್ಳುತ್ತಿದೆ ಎಂದು ಪರೋಕ್ಷವಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಿರುವ ಸಿಎಂ ನಡೆಗೆ ಸ್ವಾಮೀಜಿ ಆಕ್ರೋಶ ಹೂರಹಾಕಿದರು.
ಸರ್ಕಾರ ಒಂದು ಜಾತಿ ಒಂದು ವರ್ಗ ಎನ್ನುವ ರೀತಿಯಲ್ಲಿ ನಡೆಯುತ್ತಿದೆ. ಯಾರದೋ ತ್ಯಾಗದಿಂದ ಬಂದಿರುವ ಸರ್ಕಾರದ ಫಲವನ್ನು ತಮ್ಮ ಜಾತಿಗೆ ಮೀಸಲಿಡಲು ಹೊರಟಿದ್ದಾರೆ. ಇದನ್ನು ರಾಜ್ಯ ಜನತೆ ಗಮನಿಸಬೇಕು. ಅಲ್ಲದೇ ಮಹಾರಾಷ್ಟ್ರದಲ್ಲಿ ಸ್ವತಃ ಪ್ರಧಾನಿ ಮೋದಿ ಮಾತು ಕೊಟ್ಟು ತಪ್ಪಿದ್ರು. ಅಲ್ಲಿನ ಸರ್ಕಾರ ಬಿದ್ದುಹೋಗುವ ಪ್ರಸಂಗ ಬಂತು. ಇಂತಹ ಸಂದರ್ಭ ರಾಜ್ಯದಲ್ಲಿ ಬರಬಾರದು ಎಂದ ಸ್ವಾಮೀಜಿ, ಕುರುಬರಿಗೆ ಎಸ್ಟಿ ಮೀಸಲಾತಿ ಕೊಡದಿದ್ರೆ ಪರೋಕ್ಷವಾಗಿ ಸರ್ಕಾರ ಬೀಳುತ್ತೆ ಎಂದರು. ಇದಕ್ಕೆ ಗರಂ ಆದ ಈಶ್ವರಪ್ಪ ಇರುಸು ಮುರುಸುಗೊಂಡರು.
ಜೊತೆಗೆ ಬೆಳಗಾವಿ ಲೋಕಸಭೆ ಚುನಾವಣೆ ಟಿಕೆಟ್ ಕುರುಬರಿಗೆ ಕೊಡಬೇಕು ಎಂದು ಒತ್ತಾಯಿಸಿದರು. ಸ್ವಾಮೀಜಿ ಭಾಷಣದ ಬಳಿಕ ಅವರ ಬಳಿ ಬಂದ ಸಚಿವ ಈಶ್ವರಪ್ಪ ತಮ್ಮ ಆಕ್ರೋಶ ಹೂರ ಹಾಕಿದರು.