ಬಾಗಲಕೋಟೆ: ಉಪಚುನಾವಣೆಯ ಮೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಜಯಗಳಿಸುವುದು ಖಚಿತ ಎಂದು ಅರಣ್ಯ ಇಲಾಖೆ ಸಚಿವರಾದ ಅರವಿಂದ ಲಿಂಬಾವಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವ ಕಲ್ಯಾಣದಲ್ಲಿ ಬಿಜೆಪಿಗೆ ಗೆಲುವು ಫಿಕ್ಸ್. ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನ ನೋಡಿ ಮತದಾರರು ನಮ್ಮನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಹಣ ಹೊಳೆ ಹರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದವರ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಎಲ್ರೀ ಬೇಸಿಗೆಯಲ್ಲಿ ಹೊಳೆ ಹರಿಸಲಿಕ್ಕಾಗುತ್ತೆ, ಹಣ ಹಂಚುತ್ತಾ ಇದ್ರೋ ಬೇರೆ ಪೇಪರ್ ಇತ್ತೋ ಯಾರಿಗೆ ಗೊತ್ತು ಎಂದು ನಗೆ ಬೀರುತ್ತಾ ಪ್ರತಿಕ್ರಿಯೆ ನೀಡದೇ ಸಚಿವರು ಮಾತಿಗೆ ತಪ್ಪಿಸಿಕೊಂಡರು.
ರಾಜ್ಯದಲ್ಲಿ ಕೋವಿಡ್ ಹೆಚ್ಚಳ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಆರೋಗ್ಯ ಸಚಿವ, ಸಿಎಂ ಹಾಗೂ ಗೃಹ ಸಚಿವರು ಚರ್ಚೆ ಮಾಡ್ತಿದ್ದಾರೆ. ರಾಜ್ಯದಲ್ಲಿ ಯಾವ ರೀತಿ ಕ್ರಮ ಜರುಗಿಸಬೇಕು. ಆರ್ಥಿಕ ಸಮಸ್ಯೆ ಕೂಡಾ ದೇಶದಲ್ಲಿ ಇರೋದ್ರಿಂದ ಆರ್ಥಿಕ ಮುಗ್ಗಟ್ಟು ಹೇಗೆ ಎದುರಿಸಬೇಕು ಎಂಬ ವಿಚಾರವಾಗಿ ಸಿಎಂ ಅವರು ವಿಪಕ್ಷದ ನಾಯಕರ ಜೊತೆ ಚರ್ಚೆ ಮಾಡುತ್ತಾರೆ. ಅಲ್ಲದೇ ಕೇಂದ್ರ ಸರ್ಕಾರದ ಜೊತೆಗೂ ಚರ್ಚೆ ಮಾಡಿ ಕೋವಿಡ್ ಬಗ್ಗೆ ನಿರ್ಧಾರ ತೆಗೆದುಕೊಳ್ತಾರೆ ಎಂದರು.
ದೇಶದಲ್ಲಿ ಮಹಾರಾಷ್ಟ್ರ ನಂತರ ಕರ್ನಾಟಕ ಹೆಚ್ಚು ಆದಾಯ ಕೊಡುವ ರಾಜ್ಯವಾಗಿದೆ. ಹೀಗಾಗಿ ಆರ್ಥಿಕ ಮುಗ್ಗಟ್ಟು ಹೇಗೆ ಎದುರಿಸಬೇಕು ಹಾಗೂ ಕೊರೊನಾ ಹೇಗೆ ಎದುರಿಸಬೇಕು ಎಂದು ಮುಖ್ಯಮಂತ್ರಿಗಳು ಪ್ರತಿ ಪಕ್ಷಗಳ ನಾಯಕರ ಜೊತೆಗೂ ಚರ್ಚೆ ಮಾಡುತ್ತಾರೆ ಎಂದರು. ಸರ್ವ ಪಕ್ಷಗಳ ಸಭೆಗೆ ಹೋದರೆ ಏನು ಉಪಯೋಗ? ಸಭೆ ಹೋಗಲ್ಲ ಎಂದಿರುವ ಮಾಜಿ ಸಿಎಂ ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಲಹೆ ಕೇಳುವುದು ನಮ್ಮ ಕರ್ತವ್ಯ, ಬರೋದು ಬಿಡೋದು ಅವರಿಗೆ ಬಿಟ್ಟಿದ್ದು ವಿಚಾರ ಎಂದರು.
ನೈಟ್ ಕರ್ಫ್ಯೂ ಅನ್ನೋ ಒಂದು ಪ್ರಯೋಗ ಈಗಾಗಲೇ ಶುರು ಮಾಡಿದ್ದೀವಿ. ಅದು ಯಶಸ್ವಿ ಆಗುತ್ತೋ ಇಲ್ವೋ ಅನ್ನೋದನ್ನ ನೋಡಬೇಕಲ್ವಾ. ಇದನ್ನ ಆಧಾರವಾಗಿ ಇಟ್ಟುಕೊಂಡು ಸಭೆ ಕರೆದಿದ್ದಾರೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.
ಇದನ್ನೂ ಓದಿ: ಕಿಚ್ಚ ಸುದೀಪ್ಗೆ ಅನಾರೋಗ್ಯ: ಬಿಗ್ಬಾಸ್ ಮನೆಗೆ ವಾರಾಂತ್ಯದ ನಿರೂಪಕರಾಗಿ ಮತ್ತೊಬ್ಬರು ಎಂಟ್ರಿ!?