ETV Bharat / state

ಸಕ್ಕರೆ ಕಾರ್ಖಾನೆಗಳ ಕಬ್ಬಿನ ಎಫ್‌ಆರ್‌ಪಿ ದರ ಪ್ರಕಟ... ಟನ್​ ಕಬ್ಬಿಗೆ ಬೆಲೆ ಎಷ್ಟು ಗೊತ್ತೆ?

ರಾಜ್ಯದ ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬಿನಿಂದ ಉತ್ಪಾದಿಸಿದ ಸಕ್ಕರೆ ಇಳುವರಿ ಆಧಾರದಲ್ಲಿ 2019-20ನೇ ಸಾಲಿನಲ್ಲಿ (ಮೊದಲ ಕಂತು) ಪಾವತಿಸಬೇಕಾದ ಎಫ್‍ಆರ್​​​ಪಿ ದರವನ್ನು ಕಬ್ಬು ಅಭಿವೃದ್ಧಿ ಆಯುಕ್ತರು ಹಾಗೂ ಸಕ್ಕರೆ ನಿರ್ದೇಶಕರು ಪ್ರಕಟಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ತಿಳಿಸಿದರು.

author img

By

Published : Nov 15, 2019, 6:26 AM IST

ಸಕ್ಕರೆ ಕಾರ್ಖಾನೆ ಮಾಲಿಕರ ಮತ್ತು ರೈತರ ಸಭೆ

ಬಾಗಲಕೋಟೆ: ರಾಜ್ಯದ ಸಕ್ಕರೆ ಕಾರ್ಖಾನೆಗಳು 2019-20ನೇ ಸಾಲಿನಲ್ಲಿ (ಮೊದಲ ಕಂತು) ರೈತರಿಂದ ಖರೀದಿಸುವ ಪ್ರತಿ ಟನ್​ ಕಬ್ಬಿಗೆ ಎಫ್​ಆರ್​ಪಿ (ನ್ಯಾಯ ಮತ್ತು ಲಾಭದಾಯಕ ಬೆಲೆ) ನಿಗದಿಪಡಿಸಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತರು ಆದೇಶಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಜೆಂದ್ರ ತಿಳಿಸಿದ್ದಾರೆ.

ಸಕ್ಕರೆ ಕಾರ್ಖಾನೆ ಮಾಲೀಕರ ಮತ್ತು ರೈತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 67 ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬಿನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿಯನ್ನು ಆಧಾರವಾಗಿಟ್ಟುಕೊಂಡು ಪ್ರಸಕ್ತ ಸಾಲಿನ ಟನ್ ಕಬ್ಬಿಗೆ ಎಫ್‍ಆರ್​​​ಪಿ ದರ ನಿಗದಿಪಡಿಸಿದ್ದಾರೆ ಎಂದು ತಿಳಿಸಿದರು.

ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದ ದರ ನಿರ್ಧರಿಸುವ ಕುರಿತು ಶನಿವಾರ ಪ್ರತ್ಯೇಕ ಸಭೆ ನಡೆಸಿ ನಿರ್ಧರಿಸಲಾಗುವುದು. ಕಳೆದ ಸಭೆಯಲ್ಲಿ ನಿರ್ಧರಿಸಿದಂತೆ 2016-17 ಹಾಗೂ 2017-18ನೇ ಸಾಲಿನಲ್ಲಿ ಹಂಗಾಮಿನ ಘೋಷಿತ ಹೆಚ್ಚುವರಿ ದರವನ್ನು ಕಾರ್ಖಾನೆಗಳು ಆರಂಭದ ಪೂರ್ವದಲ್ಲಿ ಶೇ 50ರಷ್ಟು ಹಾಗೂ ಆರಂಭಿಸಿದ ನಂತರದ 15 ದಿನಗಳಲ್ಲಿ ಉಳಿದ ಶೇ 50ರಷ್ಟು ಬಾಕಿ ಹಣ ಪಾವತಿಸಬೇಕು ಎಂದರು.

ಈ ಸಾಲಿನ ಹಂಗಾಮಿಗೆ ಸಕ್ಕರೆ ಕಾರ್ಖಾನೆ ಹಾಗೂ ರೈತರ ನಡುವಿನ ದ್ವಿಪಕ್ಷೀಯ ಒಪ್ಪಂದದ ನಂತರವೇ ಕಬ್ಬು ನುರಿಸಲು ಆರಂಭಿಸಬೇಕು. ಜಿಲ್ಲೆಯ ವಿವಿಧ ಕಾರ್ಖಾನೆಯ ಮಾಲೀಕರು ರೈತರಿಗೆ ಎಚ್‍ಎನ್‍ಟಿ ದರದಲ್ಲಿ ತಾರತಮ್ಯ ಮಾಡಕೂಡದು. ರೈತರಿಗೆ ಯಾವುದೇ ರೀತಿ ತೊಂದರೆಯಾಗಬಾರದು. ಮಾಲೀಕರ ಮತ್ತು ರೈತರ ನಡುವಿನ ಉತ್ತಮ ಸೌಹಾರ್ದತೆ ಇರುವಂತೆ ಮಾಡುವುದೇ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕರ್ತವ್ಯ ಎಂದು ರಾಜೇಂದ್ರ ಹೇಳಿದರು.

ಎಫ್‍ಆರ್​​​ಪಿ ದರದ ವಿವರ

ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಗೆ ಎಫ್‍ಆರ್​​​ಪಿ ದರ (₹ ಗಳಲ್ಲಿ)
ಬೀಳಗಿ ಶುಗರ್ಸ್ ಲಿಮಿಟೆಡ್
2,995
ಜೆಮ್ಸ್ ಶುಗರ್ಸ್ ಲಿ. 2,981
ಸಮೀರವಾಡಿಯ ಗೋದಾವರಿ ಶುಗರ್ಸ್ ಲಿ. 2,830
ಉತ್ತೂರಿನ ಇಂಡಿಯನ್ ಕೇನ್ ಪಾವರ್ ಲಿ. 3,108
ಜಮಖಂಡಿಯ ಶುಗರ್ಸ್ ಲಿ. 3,174
ಮುಧೋಳನ ನಿರಾಣಿ ಶುಗರ್ಸ್ ಲಿ. 2,846
ಪ್ರಭುಲಿಂಗೇಶ್ವರ ಶುಗರ್ಸ್ ಲಿ. 3,157
ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಲಿ. 3,064
ನ್ಯಾಯನೇಗಲಿಯ ಇಐಡಿ ಪ್ಯಾರಿ (ಇಂಡಿಯಾ) ಲಿ. 2,987
ಸಾಯಿಪ್ರಿಯಾ ಶುಗರ್ಸ್ ಲಿ. 2,945
ಸಾವರಿನ್ ಶುಗರ್ಸ್ ಲಿ. 2,750

Intro:AnchorBody:ಪ್ರಸಕ್ತ ಸಾಲಿನ ಪ್ರತಿ ಮೆಟ್ರಿಕ್ ಟನ್ ಕಬ್ಬಿನ ಎಫ್‍ಆರ್‍ಪಿ ದರ ಪ್ರಕಟ-

ಬಾಗಲಕೋಟೆ-- ರಾಜ್ಯದ ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬಿನಿಂದ ಉತ್ಪಾದಿಸಲಾದ ಸಕ್ಕರೆ ಇಳುವಳಿ ಆಧಾರದ ಮೇಲೆ 2019-20ನೇ ಸಾಲಿಗೆ ಮೊದಲ ಕಂತಿನ ರೂಪದಲ್ಲಿ ಪಾವತಿಸಬೇಕಾದ ನ್ಯಾಯ ಮತ್ತು ಲಾಭದಾಯಕ ಬೆಲೆ (ಎಫ್‍ಆರ್‍ಪಿ) ಯನ್ನು ಕಬ್ಬು ಅಭಿವೃದ್ದಿಯ ಆಯುಕ್ತರು ಹಾಗೂ ಸಕ್ಕರೆ ನಿರ್ದೇಶಕರು ಪ್ರಕಟಿಸಿ ಆದೇಶ ಹೊರಡಿಸಿದ್ದಾರೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
         ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಸಕ್ಕರೆ ಕಾರ್ಖಾನೆ ಮಾಲಿಕರ ಮತ್ತು ರೈತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ 2018-19ನೇ ಸಾಲಿನಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 67 ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬಿನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿಯನ್ನು ಆಧಾರವಾಗಿಟ್ಟುಕೊಂಡು ಪ್ರಸಕ್ತ ಸಾಲಿನ ಪ್ರತಿ ಮೆಟ್ರಿಕ್ ಟನ್ ಕಬ್ಬಿನ ಎಫ್‍ಆರ್‍ಪಿ ದರವನ್ನು ನಿಗದಿಪಡಿಸಿದ್ದಾರೆ ಎಂದು ತಿಳಿಸಿದರು.
         ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ಪ್ರಸಕ್ತ ಸಾಲಿನ ನಿಗದಿಪಡಿಸಿದ ಪ್ರತಿ ಮೆಟ್ರಿಕ್ ಟನ್ ಕಬ್ಬಿನ ಎಫ್‍ಆರ್‍ಪಿ ದರ ಬೀಳಗಿ ಶುಗರ್ಸ್ ಲಿಮಿಟೆಡ್ ರೂ.2995, ಜೆಮ್ಸ್ ಶುಗರ್ಸ್ ರೂ.2981, ಸಮೀರವಾಡಿಯ ಗೋದಾವರಿ ಶುಗರ್ಸ್ ರೂ.2830, ಉತ್ತೂರಿನ ಇಂಡಿಯನ್ ಕೇನ್ ಪಾವರ್ ಲಿಮಿಟೆಡ್ ರೂ.3108, ಜಮಖಂಡಿಯ ಶುಗರ್ಸ್ ಲಿ. ರೂ.3174, ಮುಧೋಳನ ನಿರಾಣಿ ಶುಗರ್ಸ್ ರೂ.2846, ಪ್ರಭುಲಿಂಗೇಶ್ವರ ಶುಗರ್ಸ್ ರೂ.3157, ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ರೂ.3064, ನ್ಯಾಯನೇಗಲಿಯ ಇಐಡಿ ಪ್ಯಾರಿ (ಇಂಡಿಯಾ ಲಿ) ರೂ.2987, ಸಾಯಿಪ್ರಿಯಾ ಶುಗರ್ಸ್ ರೂ.2945, ಸಾವರಿನ್ ಶುಗರ್ಸ್ ರೂ.2750 ದರವನ್ನು ಪ್ರಕಟಿಸಿ ಆದೇಶ ಹೊರಡಿಸಿದ್ದಾರೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
         ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚಗಳ ದರವನ್ನು ನಿರ್ಧರಿಸುವ ಕುರಿತಂತೆ ಶನಿವಾರ ಪ್ರತ್ಯೆಕ ಸಭೆ ನಡೆಸಿ ನಿರ್ಧರಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಕಳೆದ ಸಭೆಯಲ್ಲಿ ನಿರ್ದರಿಸಿದಂತೆ 2016-17 ಹಾಗೂ 2017-18ನೇ ಹಂಗಾಮಿನ ಘೋಷಿತ ಹೆಚ್ಚುವರಿ ದರವನ್ನು ಕಾರ್ಖಾನೆ ಪ್ರಾರಂಭದ ಪೂರ್ವದಲ್ಲಿ ಶೇ.50 ಹಾಗೂ ಕಾರ್ಖಾನೆ ಪ್ರಾರಂಭಿಸಿದನಂತರ 15 ದಿನಗಳಲ್ಲಿ ಉಳಿದ ಶೇ.50 ಬಾಕಿ ಹಣ ಪಾವತಿಸಬೇಕು ಎಂದರು. ಪ್ರಸಕ್ತ ಸಾಲಿನ ಹಂಗಾಮಿಗೆ ಸಕ್ಕರೆ ಕಾರ್ಖಾನೆ ಹಾಗೂ ರೈತರ ನಡುವಿನ ದ್ವಿಪಕ್ಷೀಯ ಒಪ್ಪಂದದ ನಂತರವೇ ಕಬ್ಬು ನುರಿಸಲು ಪ್ರಾರಂಭಿಸತಕ್ಕದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
         ಜಿಲ್ಲೆಯ ವಿವಿಧ ಕಾರ್ಖಾನೆಯ ಮಾಲಿಕರು ರೈತರಿಗೆ ಎಚ್‍ಎನ್‍ಟಿ ದರದಲ್ಲಿ ತಾರತಮ್ಯ ಮಾಡಕೂಡದು. ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಸಕ್ಕರೆ ಕಾರ್ಖಾನೆ ಮಾಲಿಕರ ಮತ್ತು ರೈತರ ನಡುವಿನ ಉತ್ತಮ ಸೌಹಾರ್ದತೆಯನ್ನು ಇರುವಂತೆ ಮಾಡುವುದೇ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
         ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಬೆಳಗಾವಿಯ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಕಂದಗಾವ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ, ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ರೈತ ಮುಖಂಡರಾದ ವಿಶ್ವನಾಥ ಉದಗಟ್ಟಿ, ವಿಠಲ ತುಮ್ಮರಮಟ್ಟಿ, ದುಂಡಪ್ಪ ಲಿಂಗರಡ್ಡಿ, ಸುಭಾಷ ಶಿರಬೂರ, ಗಂಗಾಧರ ಮೇಟಿ ಸೇರಿದಂತೆ ವಿವಿಧ ಸಕ್ಕರೆ ಕಾರ್ಖಾನೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.