ETV Bharat / state

ನಾಲತವಾಡ ಪ.ಪಂ. ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲದ ಬಿಜೆಪಿ.. 14 ರಲ್ಲಿ 9 ಸ್ಥಾನ ಪಡೆದ ಕಾಂಗ್ರೆಸ್​ಗೆ ಆಡಳಿತ ಚುಕ್ಕಾಣಿ - ಒಂದೂ ಸ್ಥಾನ ಗೆಲ್ಲದ ಬಿಜೆಪಿ

ಬಿಜೆಪಿಯ 11 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಒಂದರಲ್ಲೂ ಗೆಲುವು ಸಾಧಿಸಿಲ್ಲ. ಅಲ್ಲದೇ ಗೆಲುವಿನ ಅಂಚಿಗೂ ಬರಲಿಲ್ಲ. ನಾಲತವಾಡದ 1ನೇ ವಾರ್ಡ್​ನಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 1 ಮತ ಪಡೆದಿದ್ದಾರೆ.

local body election
ನಾಲತವಾಡ
author img

By

Published : Dec 30, 2021, 3:14 PM IST

ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಪಟ್ಟಣ ಪಂಚಾಯತ್​ನಲ್ಲಿ ಕಾಂಗ್ರೆಸ್​ಗೆ ಮತದಾರರು ಸ್ಪಷ್ಟ ಬಹುಮತ ನೀಡಿದ್ದು, ಕ್ಷೇತ್ರದಲ್ಲಿ ಆಡಳಿತಾರೂಢ ಬಿಜೆಪಿ ಶಾಸಕರಿದ್ದರೂ ಒಂದೇ ಒಂದು ಸ್ಥಾನ ಗೆಲುವು ಸಾಧಿಸದೇ ಇರುವುದು ತೀವ್ರ ಮುಖಭಂಗ ಅನುಭವಿಸುವಂತಾಗಿದೆ.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಇಂದು ಬೆಳಗ್ಗೆ 8 ಕ್ಕೆ ಪ್ರಾರಂಭಗೊಂಡ ಮತ ಎಣಿಕೆ ಕಾರ್ಯ 8- 50 ರ ವೇಳೆಗೆ ಎಲ್ಲಾ 12 ಸ್ಥಾನಗಳ ಫಲಿತಾಂಶ ಹೊರಬಿದ್ದಿತು. ಇದರಲ್ಲಿ ಕಾಂಗ್ರೆಸ್​ 8 ಸ್ಥಾನ ಪಡೆದುಕೊಳ್ಳುವ ಮೂಲಕ ನಿಚ್ಚಳ ಬಹುಮತ ಸಾಧಿಸಿದೆ. ಇನ್ನು 3 ಪಕ್ಷೇತರ, 1 ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಪಟ್ಟಣ ಪಂಚಾಯಿತಿಯ ಒಟ್ಟು 14 ಸ್ಥಾನಗಳಲ್ಲಿ 2 ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿತ್ತು. ಅದರಲ್ಲಿ ಕಾಂಗ್ರೆಸ್, ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದರು. ಒಟ್ಟಾರೆ 14 ಸ್ಥಾನಗಳ ಬಲಾಬಲದಲ್ಲಿ 9 ರಲ್ಲಿ ಕಾಂಗ್ರೆಸ್, ನಾಲ್ವರು ಪಕ್ಷೇತರ ಹಾಗೂ ಒಂದರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಬಿಜೆಪಿಯ 11 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಒಂದರಲ್ಲೂ ಗೆಲುವು ಸಾಧಿಸಿಲ್ಲ. ಅಲ್ಲದೇ ಗೆಲುವಿನ ಅಂಚಿಗೂ ಬರಲಿಲ್ಲ. ನಾಲತವಾಡದ 1ನೇ ವಾರ್ಡ್​​​​ನಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 1 ಮತ ಪಡೆದಿದ್ದಾರೆ.

ಇದನ್ನೂ ಓದಿ: ಹಾವೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 'ಕೈ'ಮೇಲು: ಸಿಎಂ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಮುಖಭಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.