ಹಾವೇರಿ: ಯಡಿಯೂರಪ್ಪನವರು ರಾಜಕೀಯವಾಗಿ ಬೆಳೆದು ಸಿಎಂ ಆಗುವಲ್ಲಿ ಎಲ್ಲ ಸಮಾಜಕ್ಕಿಂದ ಪಂಚಮಸಾಲಿ ಸಮಾಜದ ಪಾತ್ರ ದೊಡ್ಡದಿದೆ. ಹೀಗಾಗಿ ಸಿಎಂ ಯಡಿಯೂರಪ್ಪನವರು ಲಿಂಗಾಯತ ಪಂಚಮಸಾಲಿ ಸಮಾಜವನ್ನ 2 ಎ, ಓಬಿಸಿ ಮೀಸಲಾತಿಗೆ ಸೇರಿಸಬೇಕು ಎಂದು ಬಾಗಲಕೋಟೆ ಜಿಲ್ಲೆ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂಗೆ ಕ್ಯಾಬಿನೆಟ್ ಪರಮಾಧಿಕಾರವಿದೆ. ಇದರಿಂದ ಸಿಎಂ ನಮ್ಮ ಸಮಾಜಕ್ಕೆ ಮೀಸಲಾತಿ ಕೊಡ್ತಾರೆ ಅನ್ನೋ ಭರವಸೆ ಇದೆ. ಪಂಚಮಸಾಲಿಗಳು ಅಂದ್ರೆ ಕೇವಲ ಮನೆಗೆ ಕರೆದು ಸನ್ಮಾನಿಸಿ, ಗೌರವಿಸೋರು ಮಾತ್ರವಲ್ಲ ನಾವು ಹೋರಾಟಕ್ಕೂ ಸಿದ್ದರಿದ್ದೇವೆ. ಇದೇ ತಿಂಗಳು 28ರಂದು ನಮ್ಮ ಸಮಾಜದ ಹಕ್ಕೊತ್ತಾಯಗಳಿಗಾಗಿ ಬೆಳಗಾವಿಯ ಸುವರ್ಣಸೌಧ ಮುಂಭಾಗದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ ಅಂತಾ ಹೇಳಿದರು.