ETV Bharat / state

ಹಿಜಾಬ್​-ಕೇಸರಿ ಶಾಲು ವಿವಾದ: ಬನಹಟ್ಟಿಯಲ್ಲಿ ಕಲ್ಲು ತೂರಾಟ - ಹಿಜಾಬ್ ವಿವಾದ ಬಾಗಲಕೋಟೆಯಲ್ಲಿ ಪ್ರತಿಭಟನೆ

ಹಿಜಾಬ್ V/s ಕೇಸರಿ ಶಾಲು ವಿವಾದ ಕ್ರಮೇಣವಾಗಿ ಇಡೀ ರಾಜ್ಯಕ್ಕೆ ವ್ಯಾಪಿಸುತ್ತಿದೆ. ಬಾಗಲಕೋಟೆ ಜಿಲ್ಲೆ ಬನಹಟ್ಟಿ ಪಟ್ಟಣದಲ್ಲಿ ಕಲ್ಲು ಮತ್ತು ಚಪ್ಪಲಿ ತೂರಾಟ ನಡೆದಿದೆ.

Stones throw in Bagalkot
ಹಿಜಾಬ್ ವಿವಾದ ಬಾಗಲಕೋಟೆಯಲ್ಲಿ ಪ್ರತಿಭಟನೆ
author img

By

Published : Feb 8, 2022, 1:16 PM IST

Updated : Feb 8, 2022, 1:59 PM IST

ಬಾಗಲಕೋಟೆ: ಜಿಲ್ಲೆಯಲ್ಲಿ ಹಿಜಾಬ್​​ ಹಾಗೂ ಕೇಸರಿ ವಿವಾದ ತೀವ್ರಗೊಂಡಿದೆ. ರಬಕವಿ ಬನಹಟ್ಟಿ ಪಟ್ಟಣದಲ್ಲಿ ಕಲ್ಲು, ಚಪ್ಪಲಿ ತೂರಾಟ ಹಾಗೂ ಲಾಠಿ ಚಾರ್ಜ್​ ನಡೆದಿದ್ದು, ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾನೆ.

ಹಿಜಾಬ್ ವಿವಾದ.. ಬಾಗಲಕೋಟೆಯಲ್ಲಿ ಪ್ರತಿಭಟನೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದೆಡೆ ಕೇಸರಿ ಶಾಲ್ ಹಾಕಿದ ವಿದ್ಯಾರ್ಥಿಗಳು, ಇನ್ನೊಂದೆಡೆ ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕೇಸರಿ ಧರಿಸಿದ ವಿದ್ಯಾರ್ಥಿಗಳಿಂದ ಕಾಲೇಜಿನ ಆವರಣದ ಒಳಗೆ ನುಗ್ಗಿ ಪ್ರತಿಭಟನೆ ನಡೆಸಿದರೆ, ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನ ಗೇಟ್ ಮುಂದೆ ತಡೆಯಲಾಗಿತ್ತು.

ಇದನ್ನು ವಿರೋಧಿಸಿ ಮುಖಂಡರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕಲ್ಲು ತೂರಾಟ ಮಾಡಿದ್ದರಿಂದ ಪೊಲೀಸರು ಲಾಠಿ ಚಾರ್ಜ್​ ಮಾಡಿ ಗುಂಪನ್ನು ಚದುರಿಸಿದರು.

ಇದನ್ನೂ ಓದಿ: ಹಿಜಾಬ್​ ಗಲಾಟೆ: ಶಿವಮೊಗ್ಗದಲ್ಲಿ ಉದ್ರಿಕ್ತ ಗುಂಪಿನ ಮೇಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ

ಸ್ಥಳದಲ್ಲಿ ಪೊಲೀಸ್​​ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಮಧ್ಯೆ ಬಾಗಲಕೋಟೆ ನಗರದ ವಿದ್ಯಾಗಿರಿಯ ಬಸವೇಶ್ವರ ಕಾಲೇಜ್​ಗೆ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು. ಇವರನ್ನು ಒಳಬಿಡದ ಕಾಲೇಜು ಸಿಬ್ಬಂದಿ ಜತೆ ವಿದ್ಯಾರ್ಥಿಗಳು ವಾಗ್ವಾದ ನಡೆಸಿದ ಘಟನೆ ಸಹ ಜರುಗಿತು.

ಘಟನೆ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಪೋಲಿಸರು ಕಾಲೇಜು ಪ್ರಾಚಾರ್ಯರೊಂದಿಗೆ ಮಾತುಕತೆ ನಡೆಸಿದರು. ನಾವು ಯಾವುದೇ ರೀತಿ ಗಲಾಟೆ ಮಾಡಲು ಬಂದಿಲ್ಲ. ಶಾಂತವಾಗಿಯೇ ಇರುತ್ತೇವೆ. ಎಲ್ಲರಿಗೂ ಒಂದೇ ರೀತಿಯ ಶಿಕ್ಷಣಕ್ಕೆ ಅವಕಾಶ ಕೊಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

Last Updated : Feb 8, 2022, 1:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.