ETV Bharat / state

ರಾಜ್ಯದಲ್ಲಿ ಕನ್ನಡ ಭಾಷೆ ನಶಿಸಿ ಹೋಗಲು ಸಾಧ್ಯವೇ ಇಲ್ಲ: ಡಿಸಿಎಂ ಕಾರಜೋಳ - 9th District Kannada Literary Conference

ರಾಜ್ಯದಲ್ಲಿ ಕನ್ನಡ ಭಾಷೆ ನಶಿಸಿ ಹೋಗಲು ಸಾಧ್ಯವೇ ಇಲ್ಲ. ಹಿಂದಿನ ಕಾಲದಲ್ಲಿ ಪರಕೀಯರು, ಅನ್ಯ ಧರ್ಮದವರು ಆಳಿದ್ದಾರೆ. ಅಂತಹ ಸಮಯದಲ್ಲಿಯೇ ಕನ್ನಡ ಭಾಷೆ ಅಳಿಸಿ ಹೋಗಲಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

kannada-language-cannot-be-destroyed-in-the-state
ಡಿಸಿಎಂ ಕಾರಜೋಳ
author img

By

Published : Mar 14, 2021, 6:57 PM IST

ಬಾಗಲಕೋಟೆ: ಕನ್ನಡ ಭಾಷೆ ಎಂದಿಗೂ ನಶಿಸಿ ಹೋಗಲು ಸಾಧ್ಯವೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.

ಜಿಲ್ಲೆಯ ಶಿರೂರು ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಡಿಸಿಎಂ, ರಾಜ್ಯದಲ್ಲಿ ನಮ್ಮ ಮಾತೃಭಾಷೆ ಕನ್ನಡ ನಶಿಸಿ ಹೋಗಲು ಸಾಧ್ಯವೇ ಇಲ್ಲ. ಹಿಂದಿನ ಕಾಲದಲ್ಲಿ ಪರಕೀಯರು, ಅನ್ಯ ಧರ್ಮದವರು ಆಳಿದ್ದಾರೆ. ಅಂತಹ ಸಮಯದಲ್ಲಿಯೇ ಕನ್ನಡ ಭಾಷೆ ಅಳಿಸಿ ಹೋಗಲಿಲ್ಲ, ಹೀಗಾಗಿ ಇಂತಹ ಸಾಹಿತ್ಯ ಸಮ್ಮೇಳನ ನಡೆಯುವುದು ಅಗತ್ಯವಿದೆ ಎಂದರು.

9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಮಾತು

'ಯುವಕರಿಗೆ ಓದುವ ಹವ್ಯಾಸ ಬೆಳೆಸಬೇಕಾಗಿದೆ'

ಗ್ರಂಥಾಲಯಗಳತ್ತ ಯುವಕರನ್ನು ಸೆಳೆಯುವ ಯತ್ನ ಮಾಡಬೇಕಾಗಿದೆ. ಟಿವಿ ನೋಡುವ ಬದಲು ಪುಸ್ತಕ ಓದುವ ಕಾರ್ಯ ನಡೆಯಬೇಕಾಗಿದೆ. ಪುಸ್ತಕ ಪ್ರಾಧಿಕಾರದಲ್ಲಿ ಸಾಕಷ್ಟು ಪುಸ್ತಕಗಳು ಇವೆ. ಅವುಗಳನ್ನು ಗ್ರಂಥಾಲಯಕ್ಕೆ ತೆಗೆದುಕೊಂಡು ಹೋಗಿ ಓದುವ ಹವ್ಯಾಸ ಬೆಳೆಸಬೇಕಾಗಿದೆ ಎಂದರು.

'ರಾಜ್ಯಮಟ್ಟದ ಸಮ್ಮೇಳನಕ್ಕೆ ನಮ್ಮ ಸಹಕಾರ ಇದೆ'

ಕೊರೊನಾ ಕಡಿಮೆಯಾದ ಬಳಿಕ ಕ.ಸಾ.ಪದವರು ರಾಜ್ಯ ಮಟ್ಟದ ಸಮ್ಮೇಳನ ಬಾಗಲಕೋಟೆ ಜಿಲ್ಲೆಯಲ್ಲಿ ಜರುಗಿಸಲು ಪ್ರಯತ್ನ ಮಾಡಬೇಕು. ಅದಕ್ಕೆ ನಮ್ಮ ಸಹಾಯ ಸಹಕಾರ ಇರುತ್ತದೆ ಎಂದು ತಿಳಿಸಿದರು.

ಸಮ್ಮೇಳನ ಅಧ್ಯಕ್ಷರಾಗಿದ್ದ ವಿಶ್ರಾಂತ ಕುಲಪತಿ ಮಲ್ಲಿಕಾ ಎಸ್‌. ಘಂಟಿ ಅವರು ಅಧ್ಯಕ್ಷೀಯ ಭಾಷಣ ಮಾಡಿ, ಬಾಗಲಕೋಟೆ ಜಿಲ್ಲೆಯ ಬಾದಾಮಿ ಹಂಗರಗಿ ಗ್ರಾಮದ ನಿವಾಸಿ ಆಗಿರುವ ನಾನು, ಬಾದಾಮಿ ಹಾಗೂ ಬಾಗಲಕೋಟೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಮಹಿಳೆಯರಿಗೆ ಉನ್ನತ ಶಿಕ್ಷಣ ನೀಡಲು ನಿರಾಕರಣೆ ಮಾಡುತ್ತಿದ್ದ ಆಗಿನ ಕಾಲದಲ್ಲಿ ಬಾದಾಮಿ ಹಾಗೂ ಬಾಗಲಕೋಟೆ ನಗರಕ್ಕೆ ಸಂಚಾರ ಮಾಡಿ ಅಧ್ಯಯನ ಮಾಡಿದ್ದೇನೆ. ಅಲ್ಲದೆ, ಅಂಬೇಡ್ಕರ್ ಅವರು ಹೇಳಿರುವ ವಾಕ್ಯಗಳು ಈಗ ರಾಜಕೀಯಕ್ಕೆ ಸಿಮೀತವಾಗಿದ್ದು, ಕೆಲವು ಸಂಘಟನೆಗಳು ಅವುಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ವಿಷಾದಕರ ಎಂದರು.

ಎರಡು ದಿನಗಳ ಕಾಲ ನಡೆಯುವ ಈ ಸಾಹಿತ್ಯ ಸಮ್ಮೇಳನದಲ್ಲಿ, ಕನ್ನಡ ನಾಡು, ನುಡಿ, ಮಹಾಜನ ವರದಿ ಸೇರಿದಂತೆ ಇತರ ವಿಷಯಗಳ ಬಗ್ಗೆ ಸಾಹಿತಿಗಳು, ಬುದ್ದಿಜೀವಿಗಳು, ಕನ್ನಡ ಪರ ಹೋರಾಟಗಾರರಿಂದ ಚರ್ಚೆ ನಡೆಯುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.