ಬಾಗಲಕೋಟೆ: ಜಮಖಂಡಿ ನಗರದಲ್ಲಿನ ಎಸ್ಬಿಐ ಎಟಿಎಂ ಭದ್ರತಾ ಸಿಬ್ಬಂದಿಗೆ ಕೊರೊನಾ ಸೋಂಕು ಇರುವ ಹಿನ್ನಲೆ, ಬ್ಯಾಂಕ್ ಬಂದ್ ಮಾಡಿ ಬ್ಯಂಕ್ನ ಎಲ್ಲಾ ಸಿಬ್ಬಂದಿಯನ್ನೂ ಕ್ವಾರಂಟೈನ್ನಲ್ಲಿಡಲಾಗಿದೆ.
26 ಸಿಬ್ಬಂದಿಯನ್ನು ಪ್ರತ್ಯೇಕ ಕ್ವಾರಂಟೈನ್ನಲ್ಲಿಡಲಾಗಿದ್ದು, ನೂರಾರು ಜನರಿಗೆ ಹೋಮ್ ಕ್ವಾರಂಟೈನ್ನಲ್ಲಿಡಲಾಗಿದೆ. ತಾತ್ಕಾಲಿಕವಾಗಿ ಬ್ಯಾಂಕ್ ಸೇವೆ ಸ್ಥಗಿತಗೊಂಡಿದ್ದು, ಹಣಕ್ಕಾಗಿ ಕೆಲ ಗ್ರಾಹಕರು ಪರದಾಡುವಂತಾಗಿದೆ. ಏ.13 ರಿಂದ ಏ.15 ರವರೆಗೆ ಎಟಿಎಂಗೆ ಭೇಟಿ ನೀಡಿರುವ ಗ್ರಾಹಕರ ಮಾಹಿತಿಯನ್ನು ತಾಲೂಕು ಆಡಳಿತ ಪತ್ತೆಹಚ್ಚಿ ನೂರಕ್ಕೂ ಹೆಚ್ಚು ಜನರಿಗೆ ಪರೀಕ್ಷೆ ನಡೆಸಿದೆ.
ಸ್ವಯಂ ಪ್ರೇರಿತರಾಗಿ ಆಸ್ಪತ್ರೆಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಜಮಖಂಡಿ ಉಪವಿಭಾಗಾಧಿಕಾರಿ ಮನವಿ ಮಾಡಿಕೊಂಡಿದ್ದಾರೆ. ಪೇದೆಯಿಂದ ಎಟಿಎಂ ಸಿಬ್ಬಂದಿಗೆ ಸೋಂಕು ಬಂದಿದ್ದು, ಸದ್ಯ ಎಟಿಎಂನಿಂದ ಹಣ ಪಡೆದುಕೊಂಡವರಿಗೂ ಸಹ ಸೋಂಕು ತಾಗುವ ಬಗ್ಗೆ ಜಿಲ್ಲಾಡಳಿತ ನಿಗಾ ಇಟ್ಟಿದೆ.