ಬಾಗಲಕೋಟೆ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಸಿಇಎನ್ ಕ್ರೈಮ್ ಪೊಲೀಸರು ದಾಳಿ ಮಾಡಿ, ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಕೆರಕಲಮಟ್ಟಿ ಕ್ರಾಸ್ ಬಳಿ ನಡೆದಿದೆ.
ಬಂಧಿತರಿಂದ 5 ಕೆಜಿ 750 ಗ್ರಾಮ ಗಾಂಜಾ ಅಂದಾಜು 23 ಸಾವಿರ ಬೆಲೆಯ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಕುಣಿಕೇರಿ ತಾಂಡಾದ ರಾಘವೇಂದ್ರ ಮರಿನಾಯಕ ಪೂಜಾರಿ (30), ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಶಂಕರ ಮಹಾಂತೇಶ ಹರಣಶಿಕಾರಿ (19),ಕೊಪ್ಪಳ ಜಿಲ್ಲೆಯ ಯರಿಹಂಚಿನಾಳ ಗ್ರಾಮದ 17 ವರ್ಷದ ಅಪ್ರಾಪ್ತ ಬಾಲಕನನ್ನು ಬಂಧನ ಮಾಡಲಾಗಿದೆ.
ಬಂಧಿತರಿಂದ 2000 ನಗದು ಹಣ, ಮೂರು ಮೊಬೈಲ್, ಎರಡು ಬೈಕ್ ಸೇರಿದಂತೆ ಒಟ್ಟು 67 ,000 ರೂ. ಮೌಲ್ಯದ ಸಾಮಗ್ರಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಎಸ್.ಪಿ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಮೇರೆಗೆ ಸಿಇಎನ್ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿಗಳನ್ನು ಗಾಂಜಾ ಸಮೇತ ಬಂಧನ ಮಾಡಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.