ಬಾಗಲಕೋಟೆ: ಮನೆಯಲ್ಲಿ ಕುಟುಂಬಸ್ಥರು ಇರುವಾಗಲೇ ರಾತ್ರೋರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಹೋಗಿರುವ ಘಟನೆ ವಿದ್ಯಾಗಿರಿಯ ನಂದಿಕೇಶ್ವರ ಕಾಲನಿಯಲ್ಲಿ ನಡೆದಿದೆ. ಸತೀಶ ಶಿರೋಳ ಎಂಬವರ ಮನೆಯಲ್ಲಿ ಕೃತ್ಯ ನಡೆದಿದೆ. 20 ತೊಲ ಚಿನ್ನ, 10 ತೊಲ ಬೆಳ್ಳಿ, ಎರಡು ಮೊಬೈಲ್ಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.
ಸತೀಶ ಅವರ ಪಕ್ಕದ ಮನೆಯ ಬೀಗವನ್ನೂ ಒಡೆದಿದ್ದಾರೆ. ಅದೇ ಪ್ರದೇಶದ 8 ಮನೆಗೆ ಕನ್ನ ಹಾಕಲು ಯತ್ನಿಸಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಮನೆಯ ಬಳಿಯಲ್ಲಿರುವ ಬ್ರಿಡ್ಜ್ ಕೆಳಭಾಗದಲ್ಲಿ ಕಳ್ಳತನವಾಗಿರುವ ಕೆಲವು ವಸ್ತುಗಳು ಪತ್ತೆಯಾಗಿವೆ. ನವನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ದೊಡ್ಡಬಳ್ಳಾಪುರ: 3 ತಿಂಗಳಲ್ಲಿ 3 ಬಾರಿ ದೇವಾಲಯಗಳ ಹುಂಡಿ ಎಗರಿಸಿದ ಖದೀಮರು