ಬಾಗಲಕೋಟೆ : ಹೊಸ್ತಿಲ ಹುಣ್ಣಿಮೆ ಹಿನ್ನೆಲೆಯಲ್ಲಿ ಧಾರ್ಮಿಕ ಕ್ಷೇತ್ರ ಬಾದಾಮಿ ಬನಶಂಕರಿ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಇಂದು ಹೊಸ್ತಿಲ ಹುಣ್ಣುಮೆ ನಿಮಿತ್ತ ಬೆಳಗಿನ ಜಾವ 3 ಗಂಟೆಗೆಯಿಂದಲೇ ಬಾದಾಮಿ ಬನಶಂಕರಿ ದೇವಿಗೆ ವಿಶೇಷ ಪೂಜೆ ನಡೆಸಲಾಗಿದೆ. ಅಭಿಷೇಕ, ಕುಂಕುಮಾರ್ಚನೆ ಮಾಡಿ ವಿಜೃಂಭಣೆಯಿಂದ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಿಲಾಗಿತ್ತು.
ಈ ವಿಶೇಷ ದಿನದಂದು ರಾಜ್ಯದ ನಾನಾ ಭಾಗಗಳಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಅಧಿಕ ಸಂಖ್ಯೆಯ ಭಕ್ತಾಧಿಗಳು ದೇಗುಲಕ್ಕೆ ಆಗಿಮಿಸಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು.
ದೇವಸ್ಥಾನಕ್ಕೆ ಹುಣ್ಣಿಮೆ ದಿನ 8 ರಿಂದ 10 ಸಾವಿರದವರೆಗೂ ಭಕ್ತಾಧಿಗಳು ಆಗಮಿಸುತ್ತಾರೆ. ಇಲ್ಲಿ ಬೇಡಿಕೊಂಡರೆ ಎಲ್ಲವೂ ನೆರವೇರುತ್ತೆ ಎಂಬ ನಂಬಿಕೆಯಿಂದ ಭಕ್ತಾಧಿಗಳು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ.
ಭಕ್ತಾಧಿಗಳಿಗಾಗಿ ಬನಶಂಕರಿ ದೇವಿ ಟ್ರಸ್ಟ್ ವತಿಯಿಂದ ಹುಣ್ಣಿಮೆ ಅಂಗವಾಗಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇಗುಲದ ಅರ್ಚಕ ಮಹೇಶ್ ಮಾಹಿತಿ ನೀಡದರು.