ಬಾಗಲಕೊಟೆ: ಆರೋಗ್ಯಕ್ಕಾಗಿ ಓಟ ಎಂಬುವ ಧ್ಯೇಯದೊಂದಿಗೆ ಡಿಸೆಂಬರ್ 1 ರಂದು ಹಾಪ್ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಾಗಲಕೋಟೆ ರಿಯಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಶಿವಕುಮಾರ ಸುರಪುರಮಠ ತಿಳಿಸಿದರು.
ನವನಗರದ ಪ್ರೆಸ್ ಕಬ್ಲ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಮ್ಯಾರಥಾನ್ ಓಟಕ್ಕೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಚಾಲನೆ ನೀಡಲಿದ್ದು, ಎಸ್ ಪಿ ಲೋಕೇಶ ಸೇರಿದಂತೆ ಇತರ ಮುಖಂಡರು ಭಾಗವಹಿಸಲಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಜನ ಈ ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಓಟದ ಪ್ರಯುಕ್ತ ನವೆಂಬರ್ 28 ರಂದು ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಓಟದಲ್ಲಿ ರನ್ನರ್ ಆಗಿರುವ ಅರುಣ ಭಾರದ್ವಾಜ್ ಅವರು 24 ಗಂಟೆಗಳ ಕಾಲ ಓಡುವ ಮೂಲಕ ದಾಖಲೆ ನಿರ್ಮಿಸಲಿದ್ದಾರೆ ಎಂದು ತಿಳಿಸಿದರು.