ಬಾಗಲಕೋಟೆ: ಸಿದ್ದರಾಮಯ್ಯಗೆ ಬಾದಾಮಿಗೆ ಸ್ಪರ್ಧೆ ಮಾಡಬೇಕು ಎಂದು ಒತ್ತಡ ಇದೆ. ಅವರಿಗೆ ಬಾದಾಮಿ ದೂರಾಗುತ್ತದೆ ಸಂಚಾರ ಮಾಡಲು ಆಗಲ್ಲ ಎಂಬುದಕ್ಕೆ ಜನರೇ ಹಣ ಸಂಗ್ರಹ ಮಾಡಿ ಹೆಲಿಕಾಪ್ಟರ್ ಕೂಡಿಸುತ್ತೇವೆ ಅಂದಿದ್ದಾರೆ ಎಂದು ಶಾಸಕ ಜಮೀರ್ ಅಹಮ್ಮದ್ ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಕೆರೂರ ಪಟ್ಟಣದಲ್ಲಿ ಖಾಸಗಿ ಆಗಿ ಭೇಟಿಗೆ ಆಗಮಿಸಿದ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹಮ್ಮದ್, ಸಿದ್ದರಾಮಯ್ಯ ಅವರಿಗೆ ಬಾದಾಮಿ ಕ್ಷೇತ್ರದಲ್ಲಿ ಚಿಮ್ಮನಕಟ್ಟಿ ಕುಟುಂಬದವರು ವಿರೋಧ ಇಲ್ಲ. ಸಿದ್ದರಾಮಯ್ಯ ಮಾಡಿರುವ ಅಭಿವೃದ್ದಿ ಕೆಲಸಕ್ಕೆ ಸಿದ್ದರಾಮಯ್ಯ ಅವರೇ ಅಭ್ಯರ್ಥಿ ಆಗಬೇಕೆಂದು ಚಿಮ್ಮನಕಟ್ಟಿ ಅವರ ಮಗ ರಾಜು(ಭೀಮಸೇನ) ಹೇಳುವ ಮೂಲಕ ಬಾದಾಮಿಯಲ್ಲಿ ಒತ್ತಡ ಹೆಚ್ಚಾಗುತ್ತಿದೆ ಎಂದು ಜಮೀರ್ ತಿಳಿಸಿದ್ದಾರೆ.
ಬಾದಾಮಿಯಿಂದ ಸ್ಪರ್ಧೆ ಮಾಡುವಂತೆ ನಾನು ಹೇಳುತ್ತೇನೆ ಎಂದ ಜಮೀರ್ ಅವರು, ಇದೀಗ ಬಾದಾಮಿ ಕ್ಷೇತ್ರದ ಜನರು ನನಗೆ ಹೇಳಿದರು, ಸಿದ್ದರಾಮಯ್ಯ ಬಾದಾಮಿ ದೂರ ಆಗುತ್ತೆ ಅಂತಿದ್ದಾರೆ. ಹೀಗಾಗಿ ಕ್ಷೇತ್ರದ ಜನರೇ ದೇಣಿಗೆ ಹಾಕಿ ಅವರಿಗೆ ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡುತ್ತೇವೆ. ಅವರು ಅದರಲ್ಲಿ ಕ್ಷೇತ್ರಕ್ಕೆ ಬಂದು ಹೋಗಲಿ ಅಂತಿದ್ದಾರೆ ಎಂದರು.
ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ನಲ್ಲಿ ಭಿನ್ನಮತ ಬಗ್ಗೆ ಪ್ರತಿಕ್ರಿಯೆ ನೀಡಿದ ಜಮೀರ್, ಎಲ್ಲ ಪಕ್ಷಗಳಲ್ಲಿ ಸಣ್ಣ ಪುಟ್ಟ ಭಿನ್ನಮತ ಇರುತ್ತದೆ. ಆದರೆ ಸಿದ್ದರಾಮಯ್ಯ ಬಂದರೆ ಯಾವುದೇ ಭಿನ್ನಮತ ಇರಲ್ಲ ಎಂದರು.
ಇದನ್ನೂ ಓದಿ : ಸಿದ್ಧುಗೆ ಬಾದಾಮಿ ವಿಧಾನಸಭೆ ಕ್ಷೇತ್ರವೇ ಬೆಸ್ಟ್ ಅಂತಿವೆ ಮೂಲಗಳು.. !