ಬಾಗಲಕೋಟೆ : ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಜಿಲ್ಲೆಯ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದ್ದು, ಇಳಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮದಲ್ಲಿ ರಸ್ತೆ ಕೊಚ್ಚಿ ಹೋಗಿದೆ.
ಇಳಕಲ್-ಕಂದಗಲ್ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಚ್ಚಿ ಹೋಗಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಕಿರು ಸೇತುವೆಯಲ್ಲಿ ಮುಳ್ಳು ಕಂಟಿಗಳು ತುಂಬಿದ ಕಾರಣ ರಸ್ತೆ ಮೇಲೆ ನೀರು ಹರಿದು ಹಾನಿಯಾಗಿದೆ.
ಇನ್ನು ಮಳೆಯಿಂದ ಜಿಲ್ಲೆಯ ಅಮೀನಗಡ ಪಟ್ಟಣದ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿ ಜನ ಪರದಾಡುವಂತಾಯಿತು. ಅಮೀನಗಡ ಪಟ್ಟಣ ತಗ್ಗು ಪ್ರದೇಶವಾದ್ದರಿಂದ ಎಲ್ಲಾ ಕಡೆಯಿಂದ ನೀರು ಹರಿದು ಬಂದು ರಸ್ತೆಗಳು ಜಲಾವೃತವಾಗಿದ್ದವು.
ಮಳೆಯಿಂದ ಒಂಡೆದೆ ಅವಾಂತರಗಳು ಸೃಷ್ಟಿಯಾದರೆ, ಇನ್ನೊಂದೆಡೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ರೈತರು ಮುಂಗಾರು ಕೃಷಿ ಚಟುವಟಿಕೆಗಳಿಗೆ ಅಣಿಯಾಗುತ್ತಿದ್ದಾರೆ.