ಬಾಗಲಕೋಟೆ: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೆ ತರಲಾಗಿದೆ. ಇದರಿಂದಾಗಿ ಚಿನ್ನಾಭರಣದ ಕೆಲಸ ಮಾಡುವ ಅಕ್ಕಸಾಲಿಗರು ಕಂಗಾಲಾಗಿದ್ದಾರೆ.
ಸಾಮಾನ್ಯವಾಗಿ ಮದುವೆ ಸೀಜನ್ನಲ್ಲಿ ಅಕ್ಕಸಾಲಿಗರಿಗೆ ಹೆಚ್ಚು ಬೇಡಿಕೆ ಇರುತ್ತದೆ. ಕಳೆದ ವರ್ಷವೂ ಸಹ ಮದುವೆ ಸೀಜನ್ನಲ್ಲಿ ಕೊರೊನಾ ಲಾಕ್ಡೌನ್ ಘೋಷಿಸಲಾಗಿತ್ತು. ಈ ಬಾರಿಯೂ ಮದುವೆ ಸೀಜನ್ನಲ್ಲಿಯೇ ಬಂದ್ ಮಾಡಿರುವುದರಿಂದಾಗಿ ಅಕ್ಕಸಾಲಿಗರು ಆದಾಯವಿಲ್ಲದೇ ಸಂಕಷ್ಟಕ್ಕೊಳಗಾಗಿದ್ದಾರೆ.
ಬಾಗಲಕೋಟೆ ನಗರ ಒಂದರಲ್ಲಿಯೇ ನೂರಕ್ಕೂ ಅಧಿಕ ಕುಟುಂಬದವರು ಹಲವು ವರ್ಷಗಳಿಂದ ಈ ವೃತ್ತಿಯನ್ನು ಅವಲಂಬಿಸಿಕೊಂಡು ಬಂದಿದ್ದೇವೆ. ಪದೇಪದೇ ಲಾಕ್ಡೌನ್ ಮಾಡುತ್ತಿರುವುದರಿಂದಾಗಿ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಜನತಾ ಲಾಕ್ಡೌನ್ ಫೇಲ್, ಸಂಪೂರ್ಣ ಲಾಕ್ಡೌನ್ ಬಗ್ಗೆ ಸುಧಾಕರ್ ಸುಳಿವು