ETV Bharat / state

ಬಾಗಲಕೋಟೆ: ಟ್ಯೂಷನ್​ಗೆ ಹೋಗಿದ್ದ ಬಾಲಕಿ ಕಿಡ್ನಾಪ್​ ಮಾಡಿ ಹಣಕ್ಕೆ ಬೇಡಿಕೆ - ಏಳು ವರ್ಷದ ಬಾಲಕಿ ಅಪಹರಣ

ನಿನ್ನೆ ರಾತ್ರಿ ಟ್ಯೂಷನ್​ಗೆ ಹೋಗಿದ್ದ ಬಾಲಕಿಯನ್ನು ಕಾರಿನಲ್ಲಿ ಬಂದ ಕಿಡಿಗೇಡಿಗಳು ಅಪಹರಿಸಿದ್ದಾರೆ. ಅಲ್ಲದೇ, ಆಕೆಯ ಕುಟುಂಬಸ್ಥರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ.

kidnap
ಕಿಡ್ನಾಪ್
author img

By

Published : Oct 28, 2021, 12:07 PM IST

ಬಾಗಲಕೋಟೆ: ಜಿಲ್ಲೆಯ ನವನಗರದ 61ನೇ ಸೆಕ್ಟರ್​ನಲ್ಲಿ ಹಣದ ಆಸೆಗಾಗಿ ಪರಿಚಿತರೇ ಬಾಲಕಿಯನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗ್ತಿದೆ.

ಏಳು ವರ್ಷದ ಬಾಲಕಿ ನಿತ್ಯ ಟ್ಯೂಷನ್​ಗೆ ಹೋಗುತ್ತಿದ್ದಳು. ಇದನ್ನು ಗಮನಿಸಿದ್ದ ಕಿಡಿಗೇಡಿಗಳು ನಿನ್ನೆ ರಾತ್ರಿ ಆಕೆ ಟ್ಯೂಷನ್ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಕಾರಿನಲ್ಲಿ ಬಂದು ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿದೆ. ಅಪಹರಣಕಾರರು, ಬಾಲಕಿ ತಾಯಿಗೆ ಕರೆ ಮಾಡಿದ್ದು, ನಿಮ್ಮ ಮಗಳು ಸುರಕ್ಷಿತವಾಗಿ ಹಿಂದಿರುಗಬೇಕೆಂದರೆ ನಮಗೆ 50 ಲಕ್ಷ ರೂ. ಕೊಡಿ ಎಂದು ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ತಾಯಿ, ನವನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಅಧಿಕಾರಿಗಳು ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ್ದು, ಸಂಬಂಧಿಕರೇ ಕಿಡ್ನಾಪ್ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಮತ್ತೊಂದು ಕೊಲೆ: ತಂಗಿಯನ್ನು ಪ್ರೀತಿಸಿದ್ದಕ್ಕೆ ಸ್ನೇಹಿತನಿಂದಲೇ ಯುವಕನ ಹತ್ಯೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.