ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷೆ ಕಾರ್ಯಕ್ರಮವಾದ ಉಜ್ವಲ್ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಪಡೆಯುವ ಫಲಾನುಭವಿಗಳಿಗೆ ಸಂಪೂರ್ಣವಾಗಿ ಉಚಿತ ಗ್ಯಾಸ್ ವಿತರಿಸಲಾಗುತ್ತಿದೆ. ಯಾರಾದರೂ ದುಡ್ಡು ಕೇಳಿದರೆ ತಕ್ಷಣ ಮಾಹಿತಿ ನೀಡಿ ಎಂದು ಲೋಕಸಭೆ ಚುನಾವಣೆಯ ಜಿಲ್ಲಾ ಸಂಚಾಲಕ ಹಾಗೂ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಶಿವಾನಂದ ಜಿನ್ನಿಂಗ್ ಆವರಣದಲ್ಲಿ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ 1600 ಜನರಿಗೆ ಗ್ಯಾಸ್ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಹಿಂದೆ ಮನಮೋಹನ್ ಸಿಂಗ್‍ರ 10 ವರ್ಷದ ಸರ್ಕಾರವಿದ್ದ ಸಂದರ್ಭದಲ್ಲಿ 3 ಕೋಟಿ ರೈತರ 53 ಸಾವಿರ ಕೋಟಿಯಷ್ಟು ಸಾಲವನ್ನು ಮನ್ನಾ ಮಾಡಿದರು ಆದರೆ ಇವತ್ತು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿವರ್ಷ ರೈತರ ಖಾತೆಗೆ ರೂ.6 ಸಾವಿರ ರೂ. ಜಮೆ ಮಾಡಿದರೆ ಅದು ಏಳೂವರೆ ಲಕ್ಷ ಕೋಟಿಯಾಗಲಿದೆ. ಈ ರೀತಿ ರೈತ ಪರ ಕಾರ್ಯಕ್ರಮಗಳನ್ನು ಹೆಚ್ಚು ಮೋದಿಯವರು ಜಾರಿಗೆ ತಂದಿದ್ದಾರೆ ಎಂದರು.
ಸಂಸದ ಪಿ.ಸಿ.ಗದ್ದಿಗೌಡ ಮಾತನಾಡಿ ದೇಶದಲ್ಲಿ ಮಹಿಳೆಯರು ಕಷ್ಟಗಳನ್ನು ಮನಗಂಡು ಪ್ರಧಾನಿಯವರು ಮಹಿಳೆಯರಿಗಾಗಿಯೇ ಉಜ್ವಲ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಮೋದಿಯವರು ಪ್ರಧಾನಿಯಾಗುವ ಮುಂಚೆ ಸಂಸದರಿಗೆ ಕೇವಲ 25 ಗ್ಯಾಸ್‍ಗಳನ್ನು ಉಚಿತವಾಗಿ ವಿತರಿಸಲು ಅವಕಾಶವಿತ್ತು. ಆದರೆ ಈಗ ಕಟ್ಟಕಡೆಯ ವ್ಯಕ್ತಿಗೂ ಗ್ಯಾಸ್ ಸಿಗಬೇಕು ಎಂದು ಪ್ರಧಾನಿಯವರು ಉಜ್ವಲ್ ಯೋಜನೆಯನ್ನು ಮಾಡಿದ್ದಾರೆ. ಅದರ ಸದುಪಯೋಗವನ್ನು ಎಲ್ಲ ವರ್ಗದ ಜನ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಆರೋಗ್ಯ ದೃಷ್ಟಿಯಿಂದ ದೇಶದ ಜನರಿಗಾಗಿ ಕಡಿಮೆ ದರದಲ್ಲಿ ಔಷಧ ಸಿಗುವಂತೆ ಮಾಡಿದ್ದಾರೆ. ಇನ್ನೂ ಆಯುಷ್ಮಾನ್ ಭಾರತ ಎಂಬ ಯೋಜನೆಯಿಂದ ಒಬ್ಬರಿಗೆ 5 ಲಕ್ಷದವರೆಗೆ ಆರೋಗ್ಯ ವಿಮೆ ಮಾಡಿಸಿದ್ದಾರೆ ಇಂತಹ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ ಎಂದರು.
![undefined](https://s3.amazonaws.com/saranyu-test/etv-bharath-assests/images/ad.png)