ETV Bharat / state

ತುಂಬಿ ಹರಿಯುತ್ತಿರುವ ಘಟಪ್ರಭಾ... ಬಸವೇಶ್ವರ ದೇವಾಲಯ ಜಲಾವೃತ - temple immersed from heavy rain

ಭಕ್ತರು ದೇವಸ್ಥಾನದ ಒಳಗೆ ಹೋಗಿ ಪೂಜೆ, ಪುನಸ್ಕಾರ ಮಾಡಲಿಕ್ಕೆ ಸಾಧ್ಯವಾಗುತಿಲ್ಲ. ಶ್ರಾವಣ ಮಾಸವಾದ್ದರಿಂದ ಈ ದೇವಸ್ಥಾನಕ್ಕೆ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದು, ದೇವಾಲಯ ಜಲಾವೃತವಾಗಿರುವುದರಿಂದ ಭಕ್ತರು ದೂರದಿಂದಲೇ ನಿಂತು ನಮಸ್ಕರಿಸುತ್ತಿದ್ದಾರೆ.

ಜಲಾವೃತಗೊಂಡ ದೇವಾಲಯ
author img

By

Published : Aug 2, 2019, 5:29 PM IST

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಭಾರಿ ಮಳೆ ಆಗುತ್ತಿರುವ ಪರಿಣಾಮ ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಮಾಚಕನೂರು ಗ್ರಾಮದ ಬಸವೇಶ್ವರ ದೇವಸ್ಥಾನ ನೀರಿನಲ್ಲಿ ಜಲಾವೃತಗೊಂಡಿದೆ.

ಇದರಿಂದ ಭಕ್ತರು ದೇವಸ್ಥಾನದ ಒಳಗೆ ಹೋಗಿ ಪೂಜೆ, ಪುನಸ್ಕಾರ ಮಾಡಲಿಕ್ಕೆ ಸಾಧ್ಯವಾಗುತಿಲ್ಲ. ಶ್ರಾವಣ ಮಾಸವಾದ್ದರಿಂದ ಈ ದೇವಸ್ಥಾನಕ್ಕೆ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದು, ಪೂಜೆಗೆ ಪರದಾಡುವಂತಾಗಿದೆ.

ತುಂಬಿ ಹರಿಯುತ್ತಿರುವ ಘಟಪ್ರಭಾ

ಮಹಾರಾಷ್ಟ್ರ ರಾಜ್ಯದಲ್ಲಿನ ಮಳೆಯಿಂದಾಗಿ ಕೃಷ್ಣಾ ನದಿಗೆ 2 ಲಕ್ಷ 15 ಸಾವಿರ ಕ್ಯೂಸೆಕ್​​ ನೀರು ಬಿಡುತ್ತಿರುವ ಪರಿಣಾಮ ಜಮಖಂಡಿ ತಾಲೂಕಿನ ಕಂಕಣವಾಡಿ, ಮುತ್ತೂರು, ಮೈಗೂರ, ತುಬಚಿ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ಬಗ್ಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಮೂಲಕ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.

Intro:AnchorBody:ಮಹಾರಾಷ್ಟ್ರ ದಲ್ಲಿ ಭಾರಿ ಮಳೆ ಆಗುತ್ತಿರುವ ಪರಿಣಾಮ ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುತ್ತಿರುವ ಘಟಪ್ರಭಾ ಮತ್ತು ಕೃಷ್ಣಾ ನದಿ ಪ್ರವಾಹ ಭೀತಿ ಎದುರಾಗಿದೆ.ಮುಧೋಳ ತಾಲೂಕಿನಲ್ಲಿ ಹರಿಯುತ್ತಿರುವ ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು,ಮಾಚಕನೂರು ಗ್ರಾಮದ ಹೂಳೆ ಬಸವೇಶ್ವರ ದೇವಸ್ಥಾನವು ನೀರಿನಲ್ಲಿ ಜಲಾವೃತ್ತಗೊಂಡಿದೆ.ಇದರಿಂದ ಭಕ್ತರು ದೇವಸ್ಥಾನದ ಒಳಗೆ ಹೋಗಿ ಪೂಜೆ,ಪುನಸ್ಕಾರ ಮಾಡಲಿಕ್ಕೆ ಸಾಧ್ಯವಾಗುತಿಲ್ಲ.ಶ್ರಾವಣ ಮಾಸ ದಲ್ಲಿ ಈ ದೇವಸ್ಥಾನಕ್ಕೆ ಭಕ್ತರು ಸಾಕಷ್ಟು ಪ್ರಮಾಣದಲ್ಲಿ ಬರುತ್ತಿದ್ದು,ಪೂಜೆಗೆ ಪರದಾಡುವಂತಾಗಿದೆ.ಮುಧೋಳ ತಾಲೂಕಿನ ಜಾಲಿಬೇರಿ,ನಂದಗಾವ,ಮಾಚಕನೂರು ಸೇರಿದಂತೆ ಇತರ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿ,ನಡುಗಡ್ಡೆ ಆಗಿದೆ.ಯಾದವಾಡಕ್ಕೆ ಹೋಗುವ ಸೇತುವೆ ಮುಳಗಡೆ ಆಗಿದ್ದು,ಸುತ್ತುವರೆದು ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ.ಇನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಮಳೆಯಿಂದಾಗಿ ಕೃಷ್ಣಾ ನದಿಗೆ 2 ಲಕ್ಷ 15 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬೀಡುತ್ತಿರುವ ಪರಿಣಾಮ ಜಮಖಂಡಿ ತಾಲೂಕಿನಲ್ಲಿ ಪ್ರವಾಹ ಭೀತಿ ಉಂಟಾಗಿ,ಕಂಕಣವಾಡಿ,ಮುತ್ತೂರು,ಮೈಗೂರ,ತುಬಚಿ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.ತುಬಚಿ ಸೇತುವೆ ಮುಳಗಡೆ ಆಗಿದ್ದರಿಂದ ಜಮಖಂಡಿ ಪಟ್ಟಣಕ್ಕೆ ಸಂಚಾರ ಮಾಡುತ್ತಿರುವ ಜನತೆ ಹಾಗೂ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.ಈ ಬಗ್ಗೆ ಜಿಲ್ಲಾಡಳಿತವು ತಾಲೂಕ ಆಡಳಿತ ಮೂಲಕ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.ಕೆಲ ಜಮೀನುಗಳಲ್ಲಿ ನೀರು ನುಗ್ಗಿ ಕಬ್ಬು,ಮೆಕ್ಕಜೋಳ ಸೇರಿದಂತೆ ಇತರ ಬೆಳೆಗಳಿಗೆ ನಷ್ಟ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Conclusion:Etv,Bharat,Bagalkote
ETV Bharat Logo

Copyright © 2025 Ushodaya Enterprises Pvt. Ltd., All Rights Reserved.