ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಜೆ 6 ರಿಂದ ಮುಂಜಾನೆ 6 ರವರೆಗೆ ಕಟ್ಟುನಿಟ್ಟಾಗಿ ಕರ್ಪ್ಯೂ ಜಾರಿಗೆ ತರಲು ಜಿಲ್ಲಾಡಳಿತ ಸಜ್ಜಾಗಿದೆ.
ಈ ಮಧ್ಯೆ ಹೊಸದಾಗಿ ಮತ್ತೆ ನಾಲ್ವರಿಗೆ ಕೋವಿಡ್ ಪ್ರಕರಣ ದೃಢ ಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 184ಕ್ಕೆ ಏರಿಕೆಯಾಗಿದೆ. ಬಾಗಲಕೋಟೆ ತಾಲೂಕಿನ ಮುಡಪಲಜೀವಿ ಗ್ರಾಮದ ಸೋಂಕಿತ ವ್ಯಕ್ತಿಯ ಪಿ -10642 ಪ್ರಾಥಮಿಕ ಸಂಪರ್ಕ ಹೊಂದಿದ 38 ವರ್ಷದ ಮಹಿಳೆ ಪಿ(ಬಿಜಿಕೆ-181), ಕೆಮ್ಮು, ನೆಗಡಿ, ಜ್ವರದ ಹಿನ್ನೆಲೆ ಬಾಗಲಕೋಟೆ ನವನಗರದ ಸೆಕ್ಟರ್ ನಂ.42ರ 40 ವರ್ಷದ ಮಹಿಳೆ ಪಿ(ಬಿಜಿಕೆ-182), ಮುಧೋಳ ಸೋಂಕಿತ ವ್ಯಕ್ತಿ ಪಿ-7547 ದ್ವಿತೀಯ ಸಂಪರ್ಕ ಹೊಂದಿದ ಮುಧೋಳನ ಬಳೆಗಾರ ಗಲ್ಲಿಯ 74 ವರ್ಷದ ವೃದ್ದೆಗೆ ಪಿ(ಬಿಜಿಕೆ-183), ಕೆಮ್ಮು, ನೆಗಡಿ, ಜ್ವರದ ಹಿನ್ನೆಲೆ ಬಾಗಲಕೋಟೆ ತಾಲೂಕಿನ ಖಜ್ಜಿಡೋಣಿ ಗ್ರಾಮದ 45 ವರ್ಷದ ಮಹಿಳೆಗೆ ಪಿ(ಬಿಜಿಕೆ-184) ಕೋವಿಡ್ ದೃಢಪಟ್ಟಿದೆ.
ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 1241 ಸ್ಯಾಂಪಲ್ಗಳ ವರದಿ ನಿರೀಕ್ಷೆಯಲ್ಲಿ ಆಡಳಿತವಿದೆ. ಪ್ರತ್ಯೇಕವಾಗಿ ಪಿ 688 ನಿಗಾದಲ್ಲಿ ಇಡಲಾಗಿದೆ. ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 12,587 ಇದ್ದು, ಇದರಲ್ಲಿ ನೆಗೆಟಿವ್ ಪ್ರಕರಣ 11089 ಪಾಸಿಟಿವ್ ಪ್ರಕರಣ 184, ಮೃತ ಪ್ರಕರಣಗಳ ಸಂಖ್ಯೆ 5 ಕ್ಕೆ ಏರಿದೆ.
ಜಿಲ್ಲೆಯಲ್ಲಿ ಕೋವಿಡ್-19 ನಿಂದ ಇಲ್ಲಿಯವರೆಗೆ ಗುಣಮುಖರಾದವರು 117 ಮಂದಿ, ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರು ಒಟ್ಟು 62, ಕಂಟೇನ್ ಮೆಂಟ್ ಝೋನ್ 10, ತಿರಸ್ಕೃತವಾದ ಸ್ಯಾಂಪಲ್ಗಳು 21, 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ನಿಂದ ಬಿಡುಗಡೆ ಹೊಂದಿದವರು ಒಟ್ಟು 3,502 ಜನ ಇದ್ದಾರೆ.