ETV Bharat / state

ಬಾಗಲಕೋಟೆಯಲ್ಲಿ ಮತ್ತೆ ನಾಲ್ವರು ಕೊರೊನಾಗೆ ಬಲಿ: 78 ಜನರಿಗೆ ಸೋಂಕು ದೃಢ - ಬಾಗಲಕೋಟೆ ಕೊರೊನಾ ವರದಿ

ಬಾಗಲಕೋಟೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮತ್ತೆ ನಾಲ್ವರು ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 514ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿದೆ.

four-more-death-due-to-coronavirus-in-bagalakote
ಬಾಗಲಕೋಟೆಯಲ್ಲಿ ಮತ್ತೆ ನಾಲ್ವರು ಕೊರೊನಾಗೆ ಬಲಿ
author img

By

Published : Jul 15, 2020, 3:09 AM IST

ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ಭೀತಿ ಹೆಚ್ಚಾಗುತ್ತಿದ್ದು, ಮಂಗಳವಾರ ಒಂದೇ ದಿನ ನಾಲ್ವರು ಮೃತಪಟ್ಟರೆ, 78 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.

ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 514ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿದೆ. ಜಮಖಂಡಿ ತಾಲೂಕಿನಲ್ಲಿ 3, ಹುನಗುಂದ 10, ಮುಧೋಳ 7, ಬಾದಾಮಿ 2 ಹಾಗೂ ಬಾಗಲಕೋಟೆ 56 ಸೇರಿ ಮಂಗಳವಾರ 78 ಕೋವಿಡ್ ಪ್ರಕರಣಗಳು ಕಂಡುಬಂದಿವೆ.

ಜಿಲ್ಲೆಯಿಂದ ಕಳುಹಿಸಲಾದ 1,653 ಸ್ಯಾಂಪಲ್‍ಗಳ ಪೈಕಿ 956 ಸ್ಯಾಂಪಲ್​ಗಳ ವರದಿ ನೆಗಟಿವ್ ಬಂದಿದೆ. ಬಾಕಿ ಹಾಗೂ ಹೊಸ ಸ್ಯಾಂಪಲ್​ ಸೇರಿ ಒಟ್ಟು 1,357 ವರದಿ ನಿರೀಕ್ಷಿಸಲಾಗುತ್ತಿದೆ.

1,997 ಜನರು ಪ್ರತ್ಯೇಕವಾಗಿ ನಿಗಾದಲ್ಲಿ ಇದ್ದಾರೆ. ಇಲ್ಲಿಯವರೆಗೆ 17,962 ಸ್ಯಾಂಪಲ್ ಕಳುಹಿಸಲಾಗಿದ್ದು, ಇದರಲ್ಲಿ 16018 ನೆಗಟಿವ್, 514 ಪಾಸಿಟಿವ್ ಪ್ರಕರಣ ಬಂದಿವೆ. 220 ಮಂದಿ ಕೋವಿಡ್‍ನಿಂದ ಗುಣಮುಖರಾಗಿದ್ದು, 277 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.