ಬಾಗಲಕೋಟೆ: ಹುನಗುಂದ ಹಾಗೂ ಇಳಕಲ್ಲ ತಾಲೂಕಿನಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಬಿಜೆಪಿ ಅಭ್ಯರ್ಥಿಗಳಲ್ಲ ಎಂದು ಘೋಷಣೆ ಮಾಡಲಿ. ನನ್ನ ಸೋಲಿಸಬೇಕು ಎಂದು ದೌರ್ಜನ್ಯ, ದುಷ್ಕೃತ್ಯ ಮಾಡುತ್ತಿದ್ದಾರೆ. ಆದರೆ ನಾನು ಇದಕ್ಕೆಲ್ಲಾ ಜಗ್ಗುವುದಿಲ್ಲ. ಕೊಲೆ ಬೆದರಿಕೆ ಕರೆಗಳಲ್ಲದೆ ನನ್ನ ಹಿಂದೆ ಕೆಲವರು ಸುತ್ತುತ್ತಿದ್ದು, ಮಾರಣಾಂತಿಕ ಹಲ್ಲೆ ಮಾಡಲು ಮುಂದಾಗುತ್ತಿದ್ದಾರೆ. ಇದರಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪ ಮಾಡಿದ್ದಾರೆ.
ಮುಂದೆ ನಮ್ಮ ಸರ್ಕಾರ ಬರುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿದ್ದಾರೆ. ಆಗ ನೋಡಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು. ಹುನಗುಂದ ತಾಲೂಕಿನ ಕ್ಷೇತ್ರದಲ್ಲಿ ಒಟ್ಟು 26 ಮತದಾರರು ಇದ್ದು, 13 ಮತ ನನಗೆ, 13 ಮತ ಬಿಜೆಪಿ ಅಭ್ಯರ್ಥಿಗೆ ಬರುವ ಸಾಧ್ಯತೆ ಇದೆ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕು ಎಂದರು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಬಸವಣ್ಣನವರ ಸಂಸ್ಕೃತಿ ಬೆಳೆಸಿಕೊಂಡಿದ್ದೇನೆ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ನಾವು ಯಾವ ನಾಡಿನವರು, ಬಸವಣ್ಣನವರು ಐಕ್ಯವಾದ ಕ್ಷೇತ್ರ ನನ್ನದು. ಅವರು ಸೌಮ್ಯವಾಗಿ ಮಾತನಾಡಿದರೆ, ಭೂತದ ಬಾಯಲ್ಲಿ ಭಗವದ್ಗೀತೆ ಮಂತ್ರ ಎಂಬಂತೆ ಆಗಿದೆ ಎಂದರು.