ETV Bharat / state

ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ವ ಕ್ಷೇತ್ರದ ಮಾಹಿತಿ ಪಡೆದ ಮಾಜಿ ಸಿಎಂ - former CM siddaramayy news

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಡಿಯೋ ಕಾನ್ಫರೆನ್ಸ್​ ಮೂಲಕ ಬಾದಾಮಿ ತಹಶೀಲ್ದಾರ್​ ಸುಹಾಸ್​ ಇಂಗಳೆ ಅವರೊಂದಿಗೆ ಮಾತನಾಡಿ​ ಕ್ಷೇತ್ರದ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ.

former CM siddaramayya
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
author img

By

Published : Apr 18, 2020, 12:21 PM IST

ಬಾಗಲಕೋಟೆ: ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರದ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ಕ್ಷೇತ್ರದ ಸ್ಥಿತಿಗತಿ ಕುರಿತು ಮಾಹಿತಿ ಕಲೆಹಾಕಿದ್ದಾರೆ.

ವಿಡಿಯೋ ಕಾನ್ಫರೆನ್ಸ್​ ಮೂಲಕ ಬಾದಾಮಿ ತಹಶೀಲ್ದಾರ್​ ಸುಹಾಸ್​ ಇಂಗಳೆ ಅವರೊಂದಿಗೆ ಮಾತನಾಡಿ, ಕ್ಷೇತ್ರದ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ಮುನ್ನೆಚ್ಚರಿಕೆ ಕ್ರಮಗಳು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ದುಡಿಯಲಿಕ್ಕೆ ಹೋಗಿ ವಾಪಸ್​ ಬಂದಿರುವ ಜನತೆಯ ಬಗ್ಗೆ ವಿಚಾರಿಸಿದರು. ಅಲ್ಲದೆ ಅವರ ಮೇಲೆ ನಿಗಾ ಇಟ್ಟಿರುವ ಕುರಿತಂತೆಯೂ ಮಾಹಿತಿ ತಿಳಿದುಕೊಂಡರು.

ಅಧಿಕಾರಿಗಳಿಂದ ಸ್ವಕ್ಷೇತ್ರದ ಮಾಹಿತಿ ಪಡೆದ ಸಿದ್ದರಾಮಯ್ಯ

ಕ್ಷೇತ್ರದಲ್ಲಿ ರೈತರಿಗೆ ಯಾವುದೇ ತೊಂದರೆ ಆಗದಂತೆ ಬೆಳೆದ ಬೆಳೆ ಖರೀದಿಸಿ ಮಾರಾಟ ಮಾಡಲು ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೊರೊನಾ ತಡೆಗಟ್ಟಲು ಎಲ್ಲ ಆದೇಶ ಪಾಲಿಸುವಂತೆ ಸಿದ್ದರಾಮಯಯ್ಯ ತಾಕೀತು ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.