ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇಯ ದಿನವೂ ಸಹ ಬಾದಾಮಿ ತಾಲೂಕಿನಲ್ಲಿ ಪ್ರವಾಹಕ್ಕೆ ತುತ್ತಾಗಿರುವ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಾದಾಮಿ ತಾಲೂಕಿನ ಖ್ಯಾಡ ಗ್ರಾಮಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದರು. ಈ ಸಂದರ್ಭದಲ್ಲಿಸಂತ್ರಸ್ತರ ಅಹವಾಲು ಸ್ವೀಕರಿಸಿದ ಸಿದ್ದರಾಮಯ್ಯನವರು, ಗ್ರಾಮ ಸಂಪೂರ್ಣ ಸ್ಥಳಾಂತರ ಮಾಡುವ ಬಗ್ಗೆ ಭರವಸೆ ನೀಡಿದರು. ಶಿರಬಡಗಿ, ಗೋನಾಳ, ಕಟಾಪೂರ, ಚಿಮ್ಮಲಗಿ, ಮಂಗಳಗುಡ್ಡ, ಪಟ್ಟದಕಲ್ಲು, ನಂದಿಕೇಶ್ವರ ಹಾಗೂ ಶಿವಯೋಗಿ ಮಂದಿರ ಸೇರಿದಂತೆ ವಿವಿಧ ಪ್ರದೇಶದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ತರ ಸಮಸ್ಯೆ ಆಲಿಸಿದರು.
ನೆರೆ ಬಾಧಿತ ಕುಟುಂಬಕ್ಕೆ ಸರ್ಕಾರದಿಂದ ವಿಶೇಷ ಫುಡ್ ಪಾಕೇಟ್, 10 kg ಅಕ್ಕಿ, 1 kg ತೊಗರಿ ಬೆಳೆ, 1 kg ಸಕ್ಕರೆ, 1 ಲೀಟರ್ ಪಾಮ್ ಎಣ್ಣೆ, 1 kg ಅಯೋಡಿನ್ ಉಪ್ಪು ಹಾಗೂ 5 ಲೀಟರ್ ಸೀಮೆಎಣ್ಣೆ ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತಿದೆ ಎಂದ ಅವರು ಬಾದಾಮಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿದ್ದ ಕುಟುಂಬಗಳಿಗೆ ಫುಡ್ ಪ್ಯಾಕೇಟ್ಗಳನ್ನು ವಿತರಿಸಿದರು.