ಬಾಗಲಕೋಟೆ: ಕೋವಿಡ್-19 ಭೀತಿಯ ಜೊತೆಗೆ ಲಾಕ್ ಡೌನ್ ನಿಂದ ತೊಂದರೆಗೆ ಒಳಗಾದ ಜಿಲ್ಲೆಯ ಬಡ ಕುಟುಂಬದ ಕ್ರೀಡಾಪಟುಗಳಿಗೆ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಅವರು ಜಿ.ಪಂ ಸಮುದಾಯ ಕೇಂದ್ರದಲ್ಲಿಂದು ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಿದರು.
ಜಿಲ್ಲೆಯ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿ, ಬಡತನದಿಂದ ಕುಟುಂಬ ನಿರ್ವಹಣೆಗೆ ಕಷ್ಟ ಆಗುತ್ತಿರುವ ವಿಷಯ ಅಧಿಕಾರಿಗಳ ಗಮನ ಬಂದು ಅಧಿಕಾರಿಗಳು ಕಿಟ್ ನೀಡುವ ಯೋಚನೆ ಮಾಡಿದ್ದಾರೆ. ಇದರಿಂದ ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ, ಗೋಧಿ ಹಿಟ್ಟು, ಬೇಳೆ ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ನೀಡಲಾಗಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸಂಬಂಧಿಸಿದ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಸೈಕ್ಲಿಂಗ್, ಕುಸ್ತಿ, ಮಲ್ಲಕಂಬ ಹಾಗೂ ಅಥ್ಲೆಟಿಕ್ಸ್ ಕ್ರೀಡಾಪಟುಗಳಿಗೆ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಎನ್.ವಾಯ್.ಕುಂದರಗಿ, ತರಬೇತುದಾರರಾದ ಅನಿತಾ ನಿಂಬರಗಿ ಸೇರಿದಂತೆ ಇತರರು ಇದ್ದರು.