ETV Bharat / state

ಮಹಾರಾಷ್ಟ್ರದಲ್ಲಿ ಹೆಚ್ಚಾದ ಮಳೆ: ಜಮಖಂಡಿಯಲ್ಲಿ ಪ್ರವಾಹ ಭೀತಿ - heavy rain in maharastra

ಮಹಾರಾಷ್ಟ್ರ ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೊಯ್ನಾ ಹಾಗೂ ಧೂದ್​ಗಂಗಾ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಇದರಿಂದ ಜಮಖಂಡಿ ತಾಲೂಕಿನಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

Flood threat to Krishna- Ghataprabha rivers
ಕೃಷ್ಣ- ಘಟಪ್ರಭಾ ನದಿಗಳಿಗೆ ಪ್ರವಾಹ ಭೀತಿ
author img

By

Published : Jun 18, 2020, 3:51 PM IST

ಬಾಗಲಕೋಟೆ: ಮಹಾರಾಷ್ಟ್ರದ ಸಹ್ಯಾದ್ರಿ ಬೆಟ್ಟದಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಕೃಷ್ಣ ಹಾಗೂ ಘಟಪ್ರಭಾ ನದಿಗಳಿಗೆ ಪ್ರವಾಹದ ಭೀತಿ ಎದುರಾಗಿದೆ.

ಜಿಲ್ಲೆಯ ಹಿಪ್ಪರಗಿ ಜಲಾಶಯದಲ್ಲಿ 521.60 ಮೀಟರ್​​ ನೀರು ಸಂಗ್ರಹವಾಗಿದ್ದು, ಒಟ್ಟು ಸಂಗ್ರಹದ ಸಾಮರ್ಥ್ಯ 3.14 ಟಿಎಂಸಿ ಇದೆ. ಒಳಹರಿವು 44 ಸಾವಿರ ಕ್ಯೂಸೆಕ್​ ಇದ್ದು, ಅಷ್ಟೇ ಪ್ರಮಾಣದ ನೀರನ್ನು ಆಲಮಟ್ಟಿ ಡ್ಯಾಂಗೆ ಬಿಡಲಾಗುತ್ತಿದೆ. ಇದೀಗ ಹಿಪ್ಪರಗಿ ಜಲಾಶಯದಿಂದ ಚಿಕ್ಕ ಪಡಸಲಗಿ ಬ್ಯಾರೇಜ್ ಮೂಲಕ ನೀರನ್ನು ಹರಿಬಿಡಲಾಗುತ್ತಿದೆ.

ಕೃಷ್ಣ- ಘಟಪ್ರಭಾ ನದಿ ಪ್ರದೇಶಗಳಲ್ಲಿ ಪ್ರವಾಹ ಭೀತಿ

ಮಹಾರಾಷ್ಟ್ರ ರಾಜ್ಯದ ಹೆಚ್ಚು ಮಳೆಯಿಂದಾಗಿ ಕೊಯ್ನಾ ಹಾಗೂ ಧೂದ್​ಗಂಗಾ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಇದರಿಂದ ಜಮಖಂಡಿ ತಾಲೂಕಿನಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದ್ದು, 1 ಲಕ್ಷ ಕ್ಯೂಸೆಕ್​ಗೂ ಅಧಿಕ ಪ್ರಮಾಣದಲ್ಲಿ ಒಳಹರಿವು ಬಂದಲ್ಲಿ ಪ್ರವಾಹ ಭೀತಿ ಎದುರಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.