ETV Bharat / state

ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ

author img

By

Published : Aug 16, 2020, 9:10 PM IST

ಗೋವನಕೊಪ್ಪ ಸೇತುವೆಗೆ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಮಲಪ್ರಭಾ ನದಿ ತೀರದ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ
ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಮಳೆ ಹಾಗೂ ವಿವಿಧ ಡ್ಯಾಂಗಳಿಂದ ನೀರು ಹರಿಬಿಟ್ಟಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಶುರುವಾಗಿದೆ. ನವಿಲು ತೀರ್ಥ ಡ್ಯಾಂನಿಂದ 15 ಸಾವಿರ ಕ್ಯುಸೆಕ್​​ ನೀರು ಹರಿಬಿಟ್ಟ ಕಾರಣ ಬಾದಾಮಿ ತಾಲ್ಲೂಕಿನ ಮಲಪ್ರಭಾ ನದಿತೀರದಲ್ಲಿ ಮತ್ತೆ ಪ್ರವಾಹದ ಆತಂಕ ಎದುರಾಗಿದೆ.

ಇಂದು ಬೆಳಗ್ಗೆ ನವಿಲು ತೀರ್ಥ ಡ್ಯಾಂನಿಂದ 10 ಸಾವಿರ ಕ್ಯುಸೆಕ್ ನೀರು ಬಿಡಲಾಗಿತ್ತು. ನಂತರ ಹೆಚ್ಚುವರಿ 5 ಸಾವಿರ ಕ್ಯುಸೆಕ್​ ಸೇರಿ ಒಟ್ಟು 15 ಸಾವಿರ ಕ್ಯುಸೆಕ್​ ನೀರು ಬಿಡಲಾಗಿದೆ. ಇದರಿಂದ ತಾಲ್ಲೂಕಿನ 34 ಹಳ್ಳಿಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಬಾದಾಮಿ ತಾಲ್ಲೂಕಿನ ಗೋವನಕೊಪ್ಪ, ತಳಕವಾಡ, ಬೀರನೂರು, ಹೆಬ್ಬಳ್ಳಿ, ಸುಳ್ಳ, ಕರ್ಲಕೊಪ್ಪ, ಹಾಗನೂರು, ಆಲೂರ ಎಸ್.ಕೆ, ಕಳಸ, ಕಿತ್ತಲಿ ಸೇರಿದಂತೆ 34 ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ.

ಗೋವನಕೊಪ್ಪ ಸೇತುವೆಗೆ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಮಲಪ್ರಭಾ ನದಿ ತೀರದ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡುತ್ತಿದ್ದಾರೆ.

ಜೊತೆಗೆ ಆಯಾ ಗ್ರಾ.ಪಂ ಮೂಲಕ ನದಿ ತೀರದ ಗ್ರಾಮದಲ್ಲಿ ಡಂಗುರ ಸಾರಲಾಗುತ್ತಿದೆ. ಬಾದಾಮಿ ತಾಲ್ಲೂಕಿನ ಚೊಳಚಗುಡ್ಡ ಗ್ರಾಮಕ್ಕೆ ಪ್ರವಾಹ ಭೀತಿಯ ಕಾರಣ ಜನರು ಸುರಕ್ಷಿತವಾಗಿರುವಂತೆ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಡಂಗುರ ಸಾರಲಾಗಿದೆ. ಜೊತೆಗೆ ಹಿಡಕಲ್ ಜಲಾಶಯ ಹಾಗೂ ಉಪನದಿಯಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಮುಧೋಳ ತಾಲ್ಲೂಕಿನ ಘಟಪ್ರಭಾ ನದಿ ತೀರದ ಜನರಲ್ಲಿ ಆತಂಕ ಎದುರಾಗಿದೆ. ಸದ್ಯ ಘಟಪ್ರಭಾ ನದಿಗೆ 33,549 ಕ್ಯುಸೆಕ್​ ನೀರು ಹರಿದು ಬರುತ್ತಿದ್ದು, ಪ್ರಾರಂಭಿಕ ಹಂತದಲ್ಲಿ ಘಟಪ್ರಭಾ ನದಿ ತೀರದ ಮುಧೋಳ ತಾಲ್ಲೂಕಿನ 20 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಮಿರ್ಜಿ, ಮಾಚಕನೂರು, ಒಂಟಗೋಡಿ, ಚನಾಳ, ರೂಗಿ ಸೇರಿದಂತೆ 20 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಮಿರ್ಜಿ‌ ಮಹಲಿಂಗಪುರ ರಸ್ತೆ ಸೇತುವೆ ಜಲಾವೃತವಾಗಿದ್ದು, ‌ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಮುಧೋಳ ನದಿ ತೀರದ ಗ್ರಾಮಸ್ಥರು ಎಚ್ಚರಿಕೆಯಿಂದಿರಲು ತಾಲ್ಲೂಕಾಡಳಿತದಿಂದ ಸೂಚನೆ ನೀಡಿದ್ದು, ಹಳ್ಳಿ-ಹಳ್ಳಿಯಲ್ಲಿ ಡಂಗುರ ಸಾರಲಾಗಿದೆ.

ಕೃಷ್ಣಾ ನದಿಗೂ ಕೊಯ್ನಾ ಡ್ಯಾಮ್ ಸೇರಿದಂತೆ ವಿವಿಧ ಡ್ಯಾಮ್ ನಿಂದ 1 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕೃಷ್ಣಾ ತೀರದ 25 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.