ETV Bharat / state

ಬಾಗಲಕೋಟೆಯಲ್ಲಿ ಮತ್ತೆ 5 ಮಂದಿಗೆ ಕೊರೊನಾ ದೃಢ: 76ಕ್ಕೆ ಏರಿದ ಸೋಂಕಿತರ ಸಂಖ್ಯೆ

author img

By

Published : May 20, 2020, 12:09 PM IST

ಗರ್ಭಿಣಿ ಹಾಗೂ ಒಬ್ಬ ಸೋಂಕಿತನಿಂದ ಮತ್ತೆ 5 ಮಂದಿಗೆ ಸೋಂಕು ಹರಡಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 76ಕ್ಕೆ ಏರಿದೆ. ಈ ಹಿಂದೆ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದ ನಾಲ್ಕು ಜನರಿಗೆ 14 ದಿನಗಳ ಕ್ವಾರಂಟೈನ್ ಬಳಿಕ ಮಾಡಿದ ಮರು ಪರೀಕ್ಷೆಯಲ್ಲಿ ಪಾಸಿಟಿವ್​ ಕಂಡು ಬಂದಿದೆ.

Five more people infected in Bagalkot district
ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೆ 5 ಮಂದಿಗೆ ಸೋಂಕು ದೃಢ: 76ಕ್ಕೆ ಏರಿದ ಸೋಂಕಿತರ ಸಂಖ್ಯೆ

ಬಾಗಲಕೋಟೆ: ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದ ಗರ್ಭಿಣಿ ಹಾಗೂ ಒಬ್ಬ ಸೋಂಕಿತನಿಂದ ಮತ್ತೆ 5 ಮಂದಿಗೆ ಸೋಂಕು ಹರಡಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 76ಕ್ಕೆ ಏರಿದೆ.

ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ 4 ಜನ, ಬಾಗಲಕೋಟೆಯ ಓರ್ವ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಪಿ-1391 ಬಾಗಲಕೋಟೆಯ 38 ವರ್ಷದ ವ್ಯಕ್ತಿಗೆ ಮಹಾರಾಷ್ಟ್ರದ ಕೊಲ್ಲಾಪುರ ಪ್ರವಾಸದ ಹಿನ್ನೆಲೆ ಸೋಂಕು ತಗುಲಿದೆ. ಈ ವ್ಯಕ್ತಿ ಜಿಲ್ಲೆಗೆ ಆಗಮಿಸಿದಾಗ ಸಾಂಸ್ಥಿಕ ಕ್ವಾರಂಟೈನ್​​ಗೆ ಒಳಪಡಿಸಲಾಗಿತ್ತು. ಢಾಣಕಶಿರೂರಿನ ಪಿ-1392, 11 ವರ್ಷದ ಬಾಲಕಿ, ಪಿ-1393, 40 ವರ್ಷದ ಪುರುಷ, ಪಿ-1394, 23 ವರ್ಷದ ಯುವಕ, ಪಿ-1395, 43 ವರ್ಷದ ವ್ಯಕ್ತಿಗೆ 23 ವರ್ಷದ ಪಿ-607 ಗರ್ಭಿಣಿ ಮಹಿಳೆಯ ಸಂಪರ್ಕದಿಂದ ಸೋಂಕು ಹರಡಿದೆ ಎನ್ನಲಾಗಿದೆ.

ಈ ಹಿಂದೆ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದ ನಾಲ್ಕು ಜನರಿಗೆ 14 ದಿನಗಳ ಕ್ವಾರಂಟೈನ್ ಬಳಿಕ ಮಾಡಿದ ಮರು ಪರೀಕ್ಷೆಯಲ್ಲಿ ಪಾಸಿಟಿವ್​ ಕಂಡು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.