ETV Bharat / state

ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ: ಬದಾಮಿಯಲ್ಲಿ ಮೂರು ಅಂಗಡಿಗಳು ಸುಟ್ಟು ಭಸ್ಮ - ಬದಾಮಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ

ಬದಾಮಿ-ಬಾಗಲಕೋಟೆ ರಸ್ತೆಯಲ್ಲಿರುವ ಬೈಕ್ ಗ್ಯಾರೇಜ್, ಫರ್ನಿಚರ್ ಅಂಗಡಿ, ಹೋಟೆಲ್ ನಲ್ಲಿ ನಸುಕಿನಜಾವ 3 ಗಂಟೆ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ.

Fire to three stores from electrical short circuit In Badami
ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ
author img

By

Published : Nov 6, 2020, 10:58 AM IST

ಬಾಗಲಕೋಟೆ: ಬೈಕ್ ಗ್ಯಾರೇಜ್ ನಲ್ಲಿ ಉಂಟಾದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮೂರು ಅಂಗಡಿಗಳಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಜಿಲ್ಲೆಯ ಬದಾಮಿ ಪಟ್ಟಣದಲ್ಲಿ ನಡೆದಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ

ಬದಾಮಿ-ಬಾಗಲಕೋಟೆ ರಸ್ತೆಯಲ್ಲಿರುವ ಬೈಕ್ ಗ್ಯಾರೇಜ್, ಫರ್ನಿಚರ್ ಅಂಗಡಿ, ಹೋಟೆಲ್ ನಲ್ಲಿ ನಸುಕಿನಜಾವ 3 ಗಂಟೆ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಮೊದಲಿಗೆ ಅಲ್ಲಾಭಕ್ಷ ಹೆಬ್ಬಳ್ಳಿ ಎಂಬುವರ ಬೈಕ್ ಗ್ಯಾರೇಜ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಗ್ಯಾರೇಜ್ ಪಕ್ಕದ ಹೂವಪ್ಪ ಕಲಾಲ ಅವರಿಗೆ ಸೇರಿದ ಹೋಟೆಲ್, ಭೀಮಸಿ ಬಡಿಗೇರ ಎಂಬುವರಿಗೆ ಸೇರಿದ ಫರ್ನೀಚರ್ ಅಂಗಡಿಗೆ ಬೆಂಕಿ ವ್ಯಾಪಿಸಿರುವ ಪರಿಣಾಮ, ಗ್ಯಾರೇಜ್ ನಲ್ಲಿದ್ದ ನಾಲ್ಕು ಬೈಕ್ ಗಳು, ಹೋಟೇಲ್ ನಲ್ಲಿದ್ದ ಪ್ಲಾಸ್ಟಿಕ್ ಖುರ್ಚಿಗಳು, ಟೇಬಲ್ ಗಳು ಹಾಗೂ ಫರ್ನಿಚರ್ ಅಂಗಡಿಯಲ್ಲಿನ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬದಾಮಿ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ‌ ನಂದಿಸಿದ್ದಾರೆ. ಈ ಕುರಿತು ಬದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.