ಬಾಗಲಕೋಟೆ: ಜಿಲ್ಲೆಯ ಇಲಕಲ್ಲ ತಾಲೂಕಿನ ಗುಡೂರ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಗೋವುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ವಾಹನ ಒಂದನ್ನ ಹಿಡಿದು ಪೊಲೀಸರಿಗೆ ನೀಡಿರುವ ಹಿನ್ನೆಲೆ ಗಲಾಟೆ ಉಂಟಾಗಿದೆ. ಗೋವು ಸಾಗಾಟ ಮಾಡುತ್ತಿದ್ದ ವಾಹನ ಹಿಡಿದು ರಾಜ ಪುರೋಹಿತ ಎಂಬುವರು ಪೊಲೀಸರಿಗೆ ಒಪ್ಪಿಸಿದರು. ಇದರಿಂದಾಗಿ ಇನ್ನೊಂದು ಕೋಮಿನ ಯುವಕನ ಜೊತೆ ಮಾತಿನ ಚಕಮಕಿ ನಡೆದಿದೆ.
ಬಕ್ರೀದ್ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆ ತೆರಳಿದ್ದ ಗುಂಪು. ಪ್ರಾರ್ಥನೆ ಮುಗಿಸಿಕೊಂಡು ಬಂದು ರಾಜ ಪುರೋಹಿತ ಎಂಬುವರು ಮನೆಗೆ ಹಾಗೂ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಇನ್ನು ಈ ಘಟನೆಯಿಂದಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತದೆ.