ಬಾಗಲಕೋಟೆ: ಶುಕ್ರವಾರದಂದು ನಡೆಯಲಿರುವ ಬದಾಮಿಯ ಬನಶಂಕರಿದೇವಿ ಜಾತ್ರಾ ಮಹೋತ್ಸವಕ್ಕೆ ಇಳಕಲ್ನಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದು, ಮಾರ್ಗದುದ್ದಕ್ಕೂ ಉಪಹಾರದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಬರುತ್ತಿರುವ ಭಕ್ತರಿಗಾಗಿ ಶಿರಾ, ಬಾಲುಷಾ, ಉಪ್ಪಿಟ್ಟು, ದೋಸೆ, ಇಡ್ಲಿ, ವಡಾ, ಪುರಿ, ಪಲಾವ್, ಮಿರ್ಜಿ, ಸೂಸುಲಾ, ಮಂಡಕ್ಕಿ ಚೂಡಾ, ಅವಲಕ್ಕಿ ಮೊಸರು, ಚಹಾ, ಬದಾಮಿ ಹಾಲು ಸೇರಿದಂತೆ ತರೇವಾರಿ ಪದಾರ್ಥಗಳನ್ನು ನೀಡಲಾಗುತ್ತಿದೆ.
ಮಹಿಳಾ ಭಕ್ತಾದಿಗಳಿಗೆ ಮಲ್ಲಿಗೆ, ಕನಕಾಂಬರಿಯಂತಹ ಹೂ ಮಾಲೆಗಳನ್ನು ಕೊಡುತ್ತಿದ್ದಾರೆ. ನಡೆದು- ನಡೆದು ಆಯಾಸವಾದವರಿಗೆ ಅಲ್ಲಲ್ಲಿ ನೋವು ನಿವಾರಕ ಮಾತ್ರೆಗಳನ್ನು ಸಹ ವಿತರಿಸಲಾಗುತ್ತಿದೆ. ಬನಶಂಕರಿ ದೇವಿ ಯಾತ್ರಾ ಸಮಿತಿಯು ಪಾದಯಾತ್ರಿಗಳ ಲಗೇಜ್ಗಳನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆಯನ್ನು ಸಹ ಕಲ್ಪಿಸಿದೆ.