ಬಾಗಲಕೋಟೆ: ತಾಲೂಕಿನ ಮುಚಖಂಡಿ ತಾಂಡಾ-1 ರಿಂದ ನೀರಲಕೇರಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾಗಣೆ ಬಗ್ಗೆ ಅಬಕಾರಿ ಸಿಬ್ಬಂದಿ ಸುಳಿವು ಪಡೆದು ಕಾರ್ಯಾಚರಣೆ ಕೈಗೊಂಡಿದ್ದರು.
ಈ ವೇಳೆ ಆರೋಪಿಗಳಿಂದ 3 ದ್ವಿಚಕ್ರ ವಾಹನ, 11 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಅಬಕಾರಿ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡರು.