ETV Bharat / state

ಕೋವಿಡ್ ಮೇಲ್ವಿಚಾರಣೆಗಾಗಿ ಸ್ವಕ್ಷೇತ್ರ ಬಾದಾಮಿಗೆ ಪ್ರವಾಸ ಕೈಗೊಂಡ ಸಿದ್ದರಾಮಯ್ಯ - Badami

ಬಿಜೆಪಿಯೊಳಗಿನ ನಾಯಕತ್ವ ಬದಲಾವಣೆ ಹಾಗೂ ಕಾಂಗ್ರೆಸ್​​ನ ಮುಂದಿನ ಸಿಎಂ ವಿಚಾರ ರಾಜಕೀಯದಲ್ಲಿ ಚರ್ಚೆಯ ವಿಷಯವಾಗಿರುವಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ಭೇಟಿ ಹಮ್ಮಿಕೊಂಡಿದ್ದಾರೆ.

ಸಿದ್ದರಾಮಯ್ಯ
ಸಿದ್ದರಾಮಯ್ಯ
author img

By

Published : May 27, 2021, 7:37 PM IST

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಮತ ಕ್ಷೇತ್ರದಲ್ಲಿ ಒಂದು ದಿನದ ಪ್ರವಾಸ ಹಮ್ಮಿಕೊಂಡಿದ್ದಾರೆ. ಕೊರೊನಾ ಹಿನ್ನೆಲೆ ಬಹಳ ದಿನಗಳ ಬಳಿಕ ತಮ್ಮ ಕ್ಷೇತ್ರಕ್ಕೆ ಆಗಮಿಸುತ್ತಿರುವ ಸಿದ್ದರಾಮಯ್ಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಕೊರೊನಾದಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಹಾಗೂ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ನಾಳೆ ಸಭೆ ನಡೆಸಲಿದ್ದಾರೆ. ನಂತರ ಮೈಸೂರಿನ ಪರೋಪಕಾರಿ ಫೌಂಡೇಶನ್ ಹಾಗೂ ಸಿದ್ದರಾಮಯ್ಯ ಅವರ ಅಭಿಮಾನಿ ಬಳಗ, ಬಾದಾಮಿ, ಕೆರೂರು ಹಾಗೂ ಗುಳೇದಗುಡ್ಡ ಸಾರ್ವಜನಿಕ ಆಸ್ಪತ್ರೆಗೆ 100 ಬೆಡ್ ವಿತರಣೆ ಮಾಡಲಿದ್ದಾರೆ.

ಇದರ ಜೊತೆಗೆ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರ ಬಿಟ್ಟು ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂದು ರಾಜಕೀಯ ವಲಯದಲ್ಲಿ ಸುದ್ದಿ ಹರಡಿದೆ. ಇದಲ್ಲದೇ ಚಾಮರಾಜಪೇಟೆ ಶಾಸಕ ಜಮೀರ್ ಸಹ ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟು ಕೂಡಲು ಸಿದ್ದ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದರಿಂದ ಕ್ಷೇತ್ರ ಜನತೆ ಅಸಮಾಧಾನ ಆಗಬಾರದು ಎಂಬ ದೃಷ್ಟಿಯಿಂದ ಸಿದ್ದರಾಮಯ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ ಎಂಬ ಮಾತು ಸಹ ಕೇಳಿಬರುತ್ತಿದೆ.

ವಿಧಾನಸಭೆ ಚುನಾವಣೆಗೆ ಇನ್ನೂ 2 ವರ್ಷ ಬಾಕಿ ಇರುವುದರಿಂದ ಈಗಾಗಲೇ ಚಾಮರಾಜಪೇಟೆಯಲ್ಲಿ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲಿನ ಸಂಪರ್ಕ ಬೆಳೆಸುವಲ್ಲಿ ಹೆಚ್ಚು ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸುರಕ್ಷಿತ ಕ್ಷೇತ್ರಕ್ಕಾಗಿ ಕೇರಳದ ವಯನಾಡಿನಲ್ಲಿ ಒಮ್ಮೆ ವಿಚಾರಿಸಿ; ಸಿದ್ದು ಕಾಲೆಳೆದ BJP

ETV Bharat Logo

Copyright © 2024 Ushodaya Enterprises Pvt. Ltd., All Rights Reserved.