ಬಾಗಲಕೋಟೆ : ಬಿಜೆಪಿ ಸರ್ಕಾರ ಹಗರಣಗಳ ಸರ್ಕಾರವಾಗಿದೆ. ಪಿಎಸ್ಐ ಪರೀಕ್ಷೆಯಲ್ಲಿನ ಅಕ್ರಮವು ದೊಡ್ಡ ಹಗರಣ. ಈ ಸರ್ಕಾರದಲ್ಲಿ ಇದೊಂದೆ ಹಗರಣ ಅಲ್ಲ. ಪ್ರೊಫೆಸರ್ ನೇಮಕಾತಿಯಲ್ಲೂ ಅಕ್ರಮವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಜಿಲ್ಲೆಯ ಇಲಕಲ್ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ಗಾಯತ್ರಿ ಪತ್ತಿನ ಸಂಘ ನಿಯಮಿತ ಬೆಳ್ಳಿ ಮಹೋತ್ಸವ ಹಾಗೂ ಕೇಂದ್ರ ಕಚೇರಿ ನೂತನ ಕಟ್ಟಡದ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಿಜೆಪಿ ಸರ್ಕಾರದಲ್ಲಿ ನಡೆದಂತಹ ಭ್ರಷ್ಟಾಚಾರ ಮತ್ತು ಹಗರಣಗಳು ಹಿಂದೆ ಯಾವಾಗಲೂ ನಡೆದಿಲ್ಲ. ಎಲ್ಲ ಇಲಾಖೆಗಳಲ್ಲೂ ಹಗರಣಗಳು ನಡೆಯುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಪಿಎಸ್ಐ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಪ್ರಶ್ನೆಪತ್ರಿಕೆ ಕೊಟ್ಟಿರುವಂತಹದ್ದು, ತಿದ್ದಿರುವಂತಹದ್ದು. ಯಾವ ಕಾಲದಲ್ಲಿ ನಡೆದಿತ್ತು ಹೇಳಿ? ಯಾವ ಕಾಲದಲ್ಲೂ ಈ ರೀತಿ ಆಗಿರಲಿಲ್ಲ. ಈ ಸರ್ಕಾರವೇ ಭ್ರಷ್ಟ ಆಗಿರುವುದರಿಂದ ಇಷ್ಟೆಲ್ಲಾ ಆಗಿದೆ. ಆರೋಪಿಗಳಿಗೆ ಇವರೇ ರಕ್ಷಣೆ ನೀಡುತ್ತಿದ್ದಾರೆ. ಹಗರಣದಲ್ಲಿ ಭಾಗಿಯಾದ ಹೆಣ್ಣು ಮಗಳನ್ನು ಬಂಧಿಸುವುದಕ್ಕೆ 20 ದಿನ ಬೇಕಾಗಿತ್ತು ಎಂದರೆ ಇದು ಸರ್ಕಾರದ ವಿಫಲತೆ ಅಲ್ವಾ ಎಂದು ಹರಿಹಾಯ್ದರು.
ಇದನ್ನೂ ಓದಿ: ಯಾರೋ ಕಿಟ್ ಕೊಟ್ರೆ, ನಾನು ಅದಕ್ಕೆ ರಿಯಾಕ್ಟ್ ಮಾಡಬೇಕಾ ಎಂದ ಸಿದ್ದರಾಮಯ್ಯ!