ಬಾಗಲಕೋಟೆ: ಬಾದಾಮಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಪ್ರವಾಸ ಹಮ್ಮಿಕೊಂಡಿದ್ದು, ಇಂದು ವಿವಿಧ ಕಾರ್ಯಕ್ರಗಳಲ್ಲಿ ಭಾಗವಹಿಸಿದರು.
ಮೊದಲು ಗೋವನಕೊಪ್ಪ ಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯ, 2 ಕೋಟಿ ರೂ. ವೆಚ್ಚದ ರಸ್ತೆ ಸುಧಾರಣೆಗೆ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ, ಮೋದಿ, ಬಿಜೆಪಿ ಅಂತಿರಲ್ರಯ್ಯ, ಜಾತಿ ನೋಡಿ ಮತ ಹಾಕಬೇಡಿ, ಕೆಲಸ ನೋಡಿ ಹಾಕಿ. ಯಾಕೆ ಹಾಕ್ತೀರಿ ಎಂದು ಯೋಚಿಸಿ ಮತ ಚಲಾಯಿಸುವುದು ಮುಖ್ಯ ಎಂದರು.
ಈ ಸರ್ಕಾರದವರು ಎಲ್ಲದಕ್ಕೂ ಕೊರೊನಾ ಅಂತಾರೆ. ಕೊರೊನಾಗೆ ಎಷ್ಟು ದುಡ್ಡ ಖರ್ಚು ಮಾಡಿದ್ದಾರೆ. 35 ಸಾವಿರ ಕೋಟಿ ರೂ. ಹೆಚ್ಚುವರಿ ಸಾಲ ಮಾಡಿದ್ದಾರೆ. ಆದ್ರೂ ನಾನು ಈ ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ಧಿ ಮಾಡ್ತಿದ್ದೇನೆ. ಇನ್ನೆರಡು ವರ್ಷಕ್ಕೆ ನಾವೇ ಅಧಿಕಾರಕ್ಕೆ ಬರ್ತೇವೆ. ಆಗ ಖಂಡಿತಾ ನಿಮ್ಮ ಕೆಲಸಗಳೆಲ್ಲವನ್ನು ಮಾಡಿ ಕೊಡ್ತೇವೆ ಎಂದು ಭರವಸೆ ನೀಡಿದರು.
ಬಳಿಕ ಬಾದಾಮಿ ಪಟ್ಟಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಮಾಡಿದರು. ನಂತರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ಕೃಷಿ ಯಂತ್ರಧಾರೆ ಯೋಜನೆಗೆ ಚಾಲನೆ ನೀಡಿದರು.