ETV Bharat / state

ಆರ್‌ಎಸ್‌ಎಸ್ ಬಗ್ಗೆ ಹಗುರವಾಗಿ ಮಾತನಾಡಬೇಡಿ; ಕಾಂಗ್ರೆಸ್‌, ಜೆಡಿಎಸ್‌ಗೆ ಸಚಿವ ಕಾರಜೋಳ ಎಚ್ಚರಿಕೆ

ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಆರೋಪ ಮಾಡಿದ್ದ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಇನ್ನೂ ಸ್ವಲ್ಪ ದಿನ ದೇಶದಲ್ಲಿ ಇಂತಹವರು ಆಡಳಿತದಲ್ಲಿ ಇದ್ದಿದ್ದರೆ ಕಾಶ್ಮೀರ ಪಾಕಿಸ್ತಾನಕ್ಕೆ ಹೋಗುತ್ತಿತ್ತು ಎಂದು ಹೇಳಿದ್ದಾರೆ.

Don't talk lightly about the RSS; Minister Karajola warns Congress, JDS
ಆರ್‌ಎಸ್‌ಎಸ್ ಬಗ್ಗೆ ಹಗುರವಾಗಿ ಮಾತನಾಡಬೇಡಿ; ಕಾಂಗ್ರೆಸ್‌, ಜೆಡಿಎಸ್‌ಗೆ ಸಚಿವ ಕಾರಜೋಳ ಎಚ್ಚರಿಕೆ
author img

By

Published : Oct 9, 2021, 3:34 PM IST

ಬಾಗಲಕೋಟೆ: ಬಿಜೆಪಿ ಪಕ್ಷದ ಜೊತೆಗೆ ಚುನಾವಣೆ ಎದುರಿಸಿ, ಆರ್‌ಎಸ್‌ಎಸ್ ಜೊತೆಗೆ ಅಲ್ಲ. ವಿನಾಕಾರಣ ಆರ್‌ಎಸ್‌ಎಸ್ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ, ತಮ್ಮ ಪೂರ್ವಾಶ್ರಮ ತೊರೆದು ಬಂದು, ಕೇಶವಕೃಪಾದಲ್ಲಿ ಸಂತರಾಗಿ, ಶರಣರಾಗಿ, ಶೂಫಿ ಸಂತರಾಗಿ ಜೀವನ ಮಾಡುತ್ತಿದ್ದಾರೆ. ಅಲ್ಲಿ ಜಾತಿ - ಧರ್ಮ ಯಾವುದು ಇಲ್ಲ, ಕೇಶವ ಕೃಪಾದಲ್ಲಿ ಯಾವ ಯಾವ ಜಾತಿಯವರು ಇದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರಿಗೆ ಹೇಳಲು ಬಯಸುತ್ತೇನೆ. ವಿನಾಕಾರಣ ನಮ್ಮ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಹೆಸರನ್ನು ತರಲು ಹೋಗಬೇಡಿರಿ ಎಂದು ಹೇಳಿದರು.

ಬಿಜೆಪಿ ಜೊತೆ ಚುನಾವಣೆ ಮಾಡಬೇಕು ಆರ್‌ಎಸ್​​ಎಸ್ ಜೊತೆಗೆ ಅಲ್ಲ. ಈ ಸಂಸ್ಥೆ ಯಾವುದೇ ಒಂದು ಪಕ್ಷಕ್ಕೆ ಸಿಮೀತವಾಗಿಲ್ಲ. ಭಾರತೀಯ ಸಂಸ್ಕೃತ ಉಳಿಸಬೇಕು, ಬೆಳಸಬೇಕು, ಧರ್ಮವನ್ನು ರಕ್ಷಣೆ ಮಾಡಬೇಕು ಎನ್ನುವ ಉದ್ದೇಶ ಹೊಂದಿರುವ ಸಂಸ್ಥೆ. ಅದರ ಬಗ್ಗೆ ಕುಮಾರಸ್ವಾಮಿ ಅವರು ವಿನಾಕಾರಣ ಚರ್ಚೆಗೆ ಬರುವುದು ಬೇಡ ಎಂದರು.

'ಇಂಥವರು ಆಡಳಿತದಲ್ಲಿ ಇದಿದ್ದರೆ ಕಾಶ್ಮೀರ ಪಾಕಿಸ್ತಾನಕ್ಕೆ ಹೋಗುತ್ತಿತ್ತು'

ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಆರೋಪ ಮಾಡಿದ್ದ ಮಾಜಿ ಪ್ರಧಾನಿ ಮಂತ್ರಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾರಜೋಳ, ಇನ್ನೂ ಸ್ವಲ್ಪ ದಿನ ದೇಶದಲ್ಲಿ ಇಂತಹವರು ಆಡಳಿತದಲ್ಲಿ ಇದ್ದಿದ್ದರೆ ಕಾಶ್ಮೀರ ಪಾಕಿಸ್ತಾನಕ್ಕೆ ಹೋಗುತ್ತಿತ್ತು. ಅದರ ಬಗ್ಗೆ ತಲೆ ಕೇಡಿಸುವುದು ಬೇಡ ಎಂದು ತಿರುಗೇಟು ನೀಡಿದರು.

ಅಖಂಡ ಭಾರತಕ್ಕಾಗಿ ಆರ್ಟಿಕಲ್​ 370 ರದ್ದು

ಕಾಶ್ಮೀರ ದಿಂದ ಕನ್ಯಾಕುಮಾರಿ ವರಿಗೆ ಈ ದೇಶ ಅಖಂಡ ಭಾರತ ಒಂದು ಎಂದು ಉಳಿಸುವ ಸಲುವಾಗಿ ನರೇಂದ್ರ ಮೋದಿ ಅವರು ಆರ್ಟಿಕಲ್‌ 370 ರದ್ದು ಮಾಡಿದ್ದಾರೆ. ಅಲ್ಲಿನ ದೀನ ದಲಿತರು, ಅಸ್ಪೃಶ್ಯರಿಗೆ ಮೀಸಲಾತಿ ವ್ಯವಸ್ಥೆ ಇರಲಿಲ್ಲ. ಇವತ್ತು ಮೀಸಲಾತಿ ಜಾರಿಗೆ ಬಂತು. ಭಾರತದ ಇತರ ರಾಜ್ಯಗಳಲ್ಲಿ ಇರುವಂತೆ ಅಲ್ಲಿನ ಪ್ರಜೆಗಳಿಗೆ ಸ್ಥಾನ ಮಾನ ಇದೆ. ಆ ಎಲ್ಲಾ ಸ್ಥಾನ ಮಾನವನನ್ನು ಕೂಡುವಂತಹ ಕೆಲಸವನ್ನು ಬಿಜೆಪಿ ಪಕ್ಷದ ನರೇಂದ್ರ ಮೋದಿ ಅವರ ಸರ್ಕಾರ ಮಾಡಿದೆ.ಅದನ್ನು ಎಲ್ಲರೂ ನೆನಪಿನಲ್ಲಿ ಇಡಬೇಕು. ವಿನಾಕಾರಣ ಟೀಕೆ ಟಿಪ್ಪಣಿ ಮಾಡಬಾರದು ಎಂದರು.

ಏತ ನಿರಾವರಿ ಪ್ರಾಯೋಗಿಕ ಚಾಲನೆ

ಇದೇ ವೇಳೆ ಸಚಿವ ಕಾರಜೋಳ, ಕೊಪ್ಪಳ ಜಿಲ್ಲೆಯ ಏತ ನೀರಾವರಿ ಮಾಡುವ ಬಗ್ಗೆ ಎರಡು ತಿಂಗಳನಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಿಲಾಗುವುದು. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ಸೇರಿದಂತೆ ಕೊಪ್ಪಳ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಯೋಜನೆ ಸದುಪಯೋಗ ಆಗಲಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ಸೇರಿದಂತೆ ಕೆಲ ಶಾಸಕರು ಹಾಗೂ ಎರಡು ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶೀಘ್ರವಾಗಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.