ಬಾಗಲಕೋಟೆ: ಅಖಂಡ ಲಿಂಗಾಯತ ಧರ್ಮಕ್ಕೆ ಸ್ವಾಮೀಜಿ ಆಗಬೇಕು ಹೂರತು ಪಂಚಮಸಾಲಿ ಸಮಾಜಕ್ಕಷ್ಟೇ ಸಿಮೀತ ಆಗಬಾರದು ಎಂದು ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರಿಗೆ ಕೂಡಲಸಂಗಮದ ಬಸವ ಧರ್ಮ ಪೀಠದ ಉಪಾಧ್ಯಕ್ಷರಾದ ಮಹದೇಶ್ವರ ಸ್ವಾಮೀಜಿ ಯವರು ಕಿವಿಮಾತು ಹೇಳಿದ್ದಾರೆ.
ನವನಗರದ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸ್ವಾಮೀಜಿಯವರು ಲಿಂಗಾಯತ ಧರ್ಮದ ಹೋರಾಟದಲ್ಲಿ ನೇತೃತ್ವ ವಹಿಸಿಕೊಂಡು ಮುಂಚೂಣಿಯಲ್ಲಿ ಇದ್ದವರು. ಈಗ ಏಕಾಏಕಿ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವುದರಿಂದ ಜಾತಿ ಸ್ವಾಮೀಜಿ ಆಗುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ ಎಂದರು.
ಲಿಂಗಾಯತರಲ್ಲಿಯೇ 99 ಉಪ ಪಂಗಡಗಳು ಬರುತ್ತಿದ್ದು, ಪಂಚಮಸಾಲಿ ಸಮಾಜವೂ ಬರಲಿದೆ. ಪಂಚಮಸಾಲಿ ಸ್ವಾಮೀಜಿಯವರು ಒಂದೇ ಸಮಾಜದ ಮೀಸಲಾತಿಗಾಗಿ ಹೋರಾಟ ಮಾಡಿದರೆ ಸಣ್ಣ ಪುಟ್ಟ ಸಮಾಜದ ಗತಿ ಏನು ಎಂದು ಪ್ರಶ್ನಿಸಿದರು.
ಓದಿ: "ವಿಧಾನ ಪರಿಷತ್ನವರು ಬಂದ್ರೆ ನಮ್ಗೆ ಭಯ"... ಸಚಿವ ಈಶ್ವರಪ್ಪ ವ್ಯಂಗ್ಯದ ಮಾತು
ಪ್ರತಿಯೊಂದು ಸಮಾಜಕ್ಕೂ ಮೀಸಲಾತಿ ಸಲ್ಲುವುದಾದರೆ ಅಖಂಡ ಲಿಂಗಾಯತ ಹೋರಾಟ ಮಾಡಬೇಕು. ಶರಣ ಮೇಳ ನಡೆಯುವ ಸಮಯದಲ್ಲಿ ಪಂಚಮಸಾಲಿ ಪೀಠದ ಶ್ರೀಗಳಿಗೆ ಆಹ್ವಾನ ಮಾಡಿದ್ದು, ಎಲ್ಲಾ ಶ್ರೀಗಳ ಸಮ್ಮುಖದಲ್ಲಿ ಪಂಚಮಸಾಲಿ ಮೀಸಲಾತಿಯನ್ನು ಕೈ ಬಿಟ್ಟು ಅಖಂಡ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡಬೇಕು ಎಂದು ಮನವರಿಕೆ ಮಾಡಿಕೂಡಲಾಗುತ್ತದೆ ಎಂದು ತಿಳಿಸಿದರು.