ಬಾಗಲಕೋಟೆ : ಶಸ್ತ್ರಚಿಕಿತ್ಸೆಗೆ ಒಳಗಾದ ಬಾಗಲಕೋಟೆ ಮತ ಕ್ಷೇತ್ರದ ಇಬ್ಬರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಂದಂತಹ ಪರಿಹಾರದ ಚೆಕ್‍ನ್ನು ಶಾಸಕರಾದ ವೀರಣ್ಣ ಚರಂತಿಮಠ ವಿತರಿಸಿದರು.
ಅಮೀನಗಡ ಪಟ್ಟಣ ಲಕ್ಷ್ಮೀ ನಗರದ ಮನ್ಸೂರ ಸಾಬ್ ಪಿಂಜಾರ ರೂ.75,000 ಹಾಗೂ ಬಾಗಲಕೋಟೆ ತಾಲೂಕು ಹಿರೇಮ್ಯಾಗೇರಿ ಗ್ರಾಮದ ಬಸವ್ವ ಸೂಡಿಗೆ ರೂ. 58,500 ರೂ. ಮೊತ್ತದ ಪರಿಹಾರ ಚೆಕ್ ನೀಡಿದರು.
ಈ ವೇಳೆ ಸುರೇಶ ಕೊಣ್ಣೂರ, ಗುರು ಅನಗವಾಡಗಿ, ರಾಜು ಮುದೇನೂರ, ಸಂಗಮೇಶ ಹಿತ್ತಲಮನಿ ಇತರರು ಉಪಸ್ಥಿತರಿದ್ದರು.