ETV Bharat / state

ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ - ಬಾದಾಮಿ ಬನಶಂಕರಿ ದೇವಸ್ಥಾನ

ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಗುಂಪು ಸೇರುವುದು, ಜಾತ್ರೆ, ಉತ್ಸವ ನಿಷೇಧ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿಗಳ ಆದೇಶದಂತೆ ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ಭಕ್ತರಿಗೆ ನಿಷೇಧ ವಿಧಿಸಿದ್ದು, ಎಂದಿನಂತೆ ಪೂಜೆ ಪುರಸ್ಕಾರ ನಡೆಸಲಾಗುತ್ತದೆ.

Badami Banashankari Temple
ಬಾದಾಮಿ ಬನಶಂಕರಿ ದೇವಸ್ಥಾನ
author img

By

Published : Apr 20, 2021, 9:32 PM IST

ಬಾಗಲಕೋಟೆ: ಕೊರೊನಾ ಭೀತಿ ಹಿನ್ನೆಲೆ ಐತಿಹಾಸಿಕ, ಧಾರ್ಮಿಕ ಕೇಂದ್ರ, ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಗುಂಪು ಸೇರುವುದು, ಜಾತ್ರೆ, ಉತ್ಸವ ನಿಷೇಧ ಮಾಡಲಾಗಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳ ಆದೇಶದಂತೆ ಭಕ್ತರಿಗೆ ನಿಷೇಧ ವಿಧಿಸಿದ್ದು, ಎಂದಿನಂತೆ ಪೂಜೆ ಪುರಸ್ಕಾರ ನಡೆಸಲಾಗುತ್ತದೆ. ದ್ವಾರ ಬಾಗಿಲ‌ ಮುಂದೆ ನಾಮಫಲಕ ಹಾಕಿ, ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಅರ್ಚಕರ ಕುಟುಂಬದವರು ಮಾತ್ರ ಪ್ರತಿನಿತ್ಯ ಪೂಜೆ, ಪುರಸ್ಕಾರ ಮಾಡಬಹುದಾಗಿದೆ.

ಇದರಿಂದ ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆ, ಹುಣ್ಣಿಮೆ ದಿನದಂದು ದೇವಿಯ ದರ್ಶನಕ್ಕೆ ಬರುತ್ತಿದ್ದ ಭಕ್ತರಿಗೆ ನಿರಾಸೆ ಉಂಟಾಗಿದೆ. ಜಿಲ್ಲಾಡಳಿತದ ಮುಂದಿನ ಆದೇಶದವರೆಗೂ ಬನಶಂಕರಿ ದೇವಾಲಯ ಕಮಿಟಿಯವರು ಭಕ್ತರಿಗೆ ನಿಷೇಧ ಹೇರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.