ಬಾಗಲಕೋಟೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮೂಲಕ ನಡೆಯುವ ಅಮೂಲ್ಯ (ಪಿ) ಸರ್ಚ ಸ್ವದೇಶಿ ದತ್ತು ಸ್ವೀಕಾರ ಕೇಂದ್ರಕ್ಕೆ ಅನಾಥ ಹೆಣ್ಣು ಶಿಶುವನ್ನು ನೀಡಲಾಗಿದೆ.
ಈ ಶಿಶು ಬಾದಾಮಿ ತಾಲೂಕಿನ ಕಾತರಕಿ ಗ್ರಾಮದ ರಂಗಪ್ಪ ತಳವಾರ ಎಂಬುವರ ಹೊಲದಲ್ಲಿ ಅಕ್ಟೋಬರ್ 16 ರಂದು ದೊರೆತಿದೆ. ಶಿಶುಗೆ 15 ದಿನಗಳಾಗಿದ್ದು, ಗೋಧಿ ಬಣ್ಣ, 1.6 ಕೆ.ಜಿ ತೂಕವಿದ್ದು, ಮಗುವಿಗೆ ಸಂಬಂಧಿಸಿದವರು ಪತ್ರಿಕೆಯಲ್ಲಿ ಪ್ರಕಟವಾದ 60 ದಿನಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸ್ತ್ರೀಶಕ್ತಿ ಭವನ, ಸೆಕ್ಟರ ನಂ.4, ನವನಗರ, ಬಾಗಲಕೋಟೆ ದೂ.ಸಂ.08354-235345 ಇವರನ್ನು ಭೇಟಿ ಮಾಡಬೇಕಾಗಿ ತಿಳಿಸಿದೆ.
ಇಲ್ಲದಿದ್ದರೆ ಮಗುವನ್ನು ಕಾನೂನು ಪ್ರಕಾರ ದತ್ತು ಪ್ರಕ್ರಿಯೆ ಮಾಡಲಾಗುತ್ತದೆ. ಈ ಕುರಿತು ಬದಾಮಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.